ಪಟಾಕಿ ರೇಟ್ ಜಾಸ್ತಿ ಆದ್ರೆ ಏನಂತೆ, ಹಬ್ಬ ಮಾತ್ರ ಭರ್ಜರಿಯಾಗಿರುತ್ತೆ ಅಂತಿದ್ದಾರೆ ಸಿಟಿ ಮಂದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೀಪಾವಳಿ ಹಿಂದೂ ಧರ್ಮದ ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವನ್ನು ಬೆಂಗಳೂರಿನಲ್ಲೂ ಬಹಳ ವೈಭವದಿಂದ ಆಚರಿಸಲಾಗುತ್ತದೆ. ಈ ಬಾರಿಯ ಹಬ್ಬದ ಅದ್ಧೂರಿ ಆಚರಣೆಗೆ ಸಿದ್ಧತೆಗಳೂ ನಡೆಯುತ್ತಿದ್ದು, ಜನರು ಪಟಾಕಿ ಅಂಗಡಿಗಳತ್ತ ಮುಖ ಮಾಡಿ ಹಬ್ಬಕ್ಕೆ ಖರೀದಿ ಮಾಡ್ತಿದ್ದಾರೆ.

ದೀಪಾವಳಿ ಸಂದರ್ಭದಲ್ಲಿ ಬೆಂಗಳೂರಿನ 456 ಸ್ಥಳಗಳಲ್ಲಿ ಪಟಾಕಿ ಅಂಗಡಿಗಳನ್ನು ತೆರೆಯಲು ಮಾರಾಟಗಾರರಿಗೆ ಬಿಬಿಎಂಪಿ ಅನುಮತಿ ನೀಡಿದೆ. ಈ ಕಾರಣಕ್ಕಾಗಿಯೇ ಏಳು ವಲಯಗಳ ಎಲ್ಲಾ ಗ್ರೌಂಡ್​ಗಳಲ್ಲಿಯೂ ಪಟಾಕಿ ಸ್ಟಾಲ್ ಸ್ಥಾಪಿಸಲಾಗಿದ್ದು, ಪಟಾಕಿ ಖರೀದಿ ಅದ್ಧೂರಿಯಾಗಿ ನಡೆಯುತ್ತಿದೆ. ಯಾವುದೇ ಅಹಿತಕರ ಘಟನೆ ಮರುಕಳಿಸದಂತೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪಟಾಕಿ ಬೆಲೆ ಸ್ವಲ್ಪ ಹೆಚ್ಚಾಗಿದೆ. ವ್ಯಾಪಾರಸ್ಥರೂ ಈ ವರ್ಷ ಹಸಿರು ಪಟಾಕಿಗಳತ್ತ ಗಮನ ಹರಿಸಿದ್ದಾರೆ.

ಯಾವ ಪಟಾಕಿಗೆ ಎಷ್ಟು ದರ?
ಸುಸುರಬತ್ತಿ – 100 ರೂ.
ಸ್ಟ್ಯಾಂಡರ್ಡ್– 1200 ರೂ.
ಫ್ಲವರ್ ಪಾಟ್ -660 ರೂ.
ನೆಲಚಕ್ರ – 350 ರೂ.
ಲಕ್ಷ್ಮಿ ಪಟಾಕಿ – 1500- 2000 ರೂ.
ಬಿಜಿಲಿ ಪಟಾಕಿ – 250 – 350 ರೂ.

ಒಟ್ಟಿನಲ್ಲಿ ದೀಪಾವಳಿ ಹಬ್ಬಕ್ಕೆ ಬೆಂಗಳೂರಿನಲ್ಲಿ ಭರದ ಸಿದ್ಧತೆ ಶುರುವಾಗಿದೆ. ಪಟಾಕಿ ಬೆಲೆ ದುಬಾರಿಯಾದರೂ, ಅದನ್ನು ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!