ಮಗ ಮೃತಪಟ್ಟಿದ್ದಾನೆಂದು ತಿಳಿಯದೇ ಮೃತದೇಹದ ಜತೆ ನಾಲ್ಕು ದಿನ ಕಳೆದ ವೃದ್ಧ ಅಂಧ ದಂಪತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಗ ಮೃತಪಟ್ಟಿದ್ದಾನೆಂದು ತಿಳಿಯದೇ ಮೃತ ದೇಹದೊಂದಿಗೆ ಅಂಧ ದಂಪತಿ 4 ದಿನ ಕಳೆದಿರುವ ಘಟನೆ ಹೈದರಾಬಾದ್‌ನ ಬ್ಲೈಂಡ್ಸ್‌ ಕಾಲೋನಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು 30 ವರ್ಷದ ಪ್ರಮೋದ್ ಎಂದು ಗುರುತಿಸಲಾಗಿದೆ.

ಪತಿ ನಿವೃತ್ತ ಸರ್ಕಾರಿ ನೌಕರ ಕಾಲುವ ರಮಣ ಮತ್ತು ಅವರ ಪತ್ನಿ ಶಾಂತಿಕುಮಾರಿ (60) ಮೇಲ್ಪಟ್ಟಿದ್ದು, ದೃಷ್ಟಿ ವಿಕಲಚೇತನರಾಗಿದ್ದರು. ದಂಪತಿ ತಮ್ಮ ಮಗ ಪ್ರಮೋದ್‌ನೊಂದಿಗೆ ಹೈದರಾಬಾದ್‌ನ ಅಪಾರ್ಟ್ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಮೃತಪಟ್ಟು 4 ದಿನದ ಬಳಿಕ ಅಕ್ಕಪಕ್ಕದವರು ಅವರ ಮನೆಯಿಂದ ಬರುತ್ತಿದ್ದ ದುರ್ವಾಸನೆಯಿಂದಾಗಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ನಾಗೋಲೆ ಪೊಲೀಸ್ ಠಾಣೆಯ ಅಧಿಕಾರಿ ಸೂರ್ಯ ನಾಯಕ್ ಮಾತನಾಡಿ, ವಿಚ್ಛೇದನದ ಬಳಿಕ ಪ್ರಮೋದ್ ಪತ್ನಿ ತನ್ನ ಎರಡು ಮಕ್ಕಳನ್ನು ಕರೆದುಕೊಂಡು ಆತನನ್ನು ಬಿಟ್ಟುಹೋಗಿದ್ದಳು. ಪತ್ನಿ ಬಿಟ್ಟುಹೋದ ಬಳಿಕ ಪ್ರಮೋದ್ ಮದ್ಯವ್ಯಸನಿಯಾಗಿದ್ದ. ದಂಪತಿಗಳು ಆತನನ್ನು ಊಟಕ್ಕಾಗಿ ಕರೆದಾಗ ಆತನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇನ್ನೂ ಅವರ ಧ್ವನಿ ತುಂಬಾ ದುರ್ಬಲವಾಗಿದ್ದ ಕಾರಣ ಅವರ ಧ್ವನಿ ನೆರೆಹೊರೆಯವರಿಗೆ ಕೇಳಿಸದೇ ಇರಬಹುದು ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!