ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ನೋಯ್ಡಾ, ಸೆಕ್ಟರ್ 74 ರಲ್ಲಿ ನಿರ್ಮಾಣ ಹಂತದಲ್ಲಿರುವ ಬ್ಯಾಂಕ್ವೆಟ್ ಹಾಲ್‌ನಲ್ಲಿ ಬೆಂಕಿ ಕಾಣಿಸಿಕೊಂಡು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಬೆಳಗಿನ ಜಾವ 3:30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಪರ್ಮಿಂದರ್ ಎಂದು ಗುರುತಿಸಲಾಗಿದೆ.
ಹತ್ತು ನಿಮಿಷಗಳಲ್ಲಿ 15 ಅಗ್ನಿಶಾಮಕ ದಳಗಳು ಸ್ಥಳಕ್ಕೆ ತಲುಪಿದವು. ಕಟ್ಟಡವು ದೊಡ್ಡದಾಗಿರುವ ಕಾರಣ ಬೆಂಕಿಯನ್ನು ನಂದಿಸಲು ಬಹಳ ಸಮಯ ಹಿಡಿಯಿತು ಎಂದು ಅಧಿಕಾರಿ ತಿಳಿಸಿದ್ದಾರೆ. ಬೆಂಕಿಯಲ್ಲಿ ಮೃತಪಟ್ಟ ಪರ್ಮಿಂದರ್ ಎಲೆಕ್ಟ್ರಿಷಿಯನ್ ಎಂದು ತಿಳಿಸಿದ್ದಾರೆ.
ನೋಯ್ಡಾ ಡಿಸಿಪಿ ರಾಮ್ ಬದನ್ ಸಿಂಗ್ ಅವರು ಮಾತನಾಡಿ, “ಮುಂಜಾನೆ 3:30 ರ ಸುಮಾರಿಗೆ ನೋಯ್ಡಾ ಸೆಕ್ಟರ್ 74 ರ ಲೋಟಸ್ ಗ್ರ್ಯಾಂಡ್ಯೂರ್ ಬ್ಯಾಂಕ್ವೆಟ್ ಹಾಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ನಮಗೆ ಮಾಹಿತಿ ಸಿಕ್ಕಿತು. ಒಟ್ಟು 15 ಅಗ್ನಿಶಾಮಕ ಟೆಂಡರ್‌ಗಳು ಇಲ್ಲಿಗೆ ತಲುಪಿದವು. ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಒಬ್ಬ ಎಲೆಕ್ಟ್ರಿಷಿಯನ್ ಪ್ರಾಣ ಕಳೆದುಕೊಂಡರು. ಆದರೆ, ಬೆಂಕಿ ಅನಾಹುತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.