ಹೊಸದಿಗಂತ ಡಿಜಿಟಲ್ ಡೆಸ್ಕ್:
ದರ್ಶನ್‌ಗೆ ಇಂದು 6 ವಾರಗಳ ಕಾಲ ಮಧ್ಯಂತರ ಜಾಮೀನು ಸಿಕ್ಕ ಬೆನ್ನಲ್ಲೇ ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿದ್ದಾರೆ.
ಬೆನ್ನು ನೋವಿನಿಂದ ಬಳುತ್ತಿದ್ದ ದರ್ಶನ್‌ಗೆ ಚಿಕಿತ್ಸೆಗಾಗಿ 6 ವಾರಗಳ ಕಾಲ ಬೇಲ್ ಸಿಕ್ಕಿದೆ. ಈ ಹಿನ್ನೆಲೆ ಕುಂಟುತ್ತಲೇ ದರ್ಶನ್ ಹೈ ಸೆಕ್ಯೂರಿಟಿ ಸೆಲ್‌ನಿಂದ ಹೊರಬಂದಿದ್ದಾರೆ. 5 ತಿಂಗಳುಗಳ ಕಾನೂನು ಸಮರ ನಂತರ ಇಂದು ದರ್ಶನ್ ಬಿಡುಗಡೆಯಾಗಿದ್ದಾರೆ. ಈ ವೇಳೆ, ದರ್ಶನ್ ನೋಡಲು ಸಾವಿರಾರು ಸಂಖ್ಯೆ ನಟನ ಫ್ಯಾನ್ಸ್ ಜೈಲಿನ ಬಳಿ ಜಮಾಯಿಸಿದ್ದರು.
ದರ್ಶನ್ ಹೊರ ಬರುತ್ತಿದ್ದಂತೆ ಅವರ ಅಭಿಮಾನಿಗಳ ಹರ್ಷೋದ್ಗಾರ, ಜೈ ಘೋಷಣೆ ಮುಗಿಲುಮುಟ್ಟಿತು.