ಅಮೆರಿಕ ಶ್ವೇತಭವನದಲ್ಲಿ ದೀಪಾವಳಿ ಸಂಭ್ರಮ: ಭಾರತೀಯರು ನೀಡಿದ್ರು ಸಾಥ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಳಕಿನ ಹಬ್ಬ ದೀಪಾವಳಿ ಆಚರಣೆ ಕೇವಲ ನಮ್ಮ ದೇಶಗಳಲ್ಲಿ ಮಾತ್ರವಲ್ಲದೆ ವಿದೇಶಿಯರು ಕೂಡ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅಮೆರಿಕಾದ ಶಕ್ತಿಭವನ ಶ್ವೇತಭವನದಲ್ಲಿ ‘ಅಮೆರಿಕ-ಭಾರತ ಸಂಬಂಧ’ಗಳ ದ್ಯೋತಕವಾಗಿ ಆಚರಿಸಲಾಗುತ್ತದೆ.

ಮುಂದಿನ ತಿಂಗಳು ಅಧ್ಯಕ್ಷೀಯ ಚುನಾವಣೆ ಕಾಣುತ್ತಿರುವ ಅಮೆರಿಕದಲ್ಲಿ ಅಧ್ಯಕ್ಷ ಜೋ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ನೇತೃತ್ವದಲ್ಲಿ ಭಾರತೀಯ ಅಮೆರಿಕನ್ನರ ಕೊಡುಗೆಗಳನ್ನು ಗೌರವಿಸುವ ದೀಪಾವಳಿ ಆಚರಣೆಯನ್ನು ಆಯೋಜಿಸಲಾಗಿತ್ತು. ಭಾರತದಲ್ಲಿನ ಯುಎಸ್ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ಕಾರ್ಯಕ್ರಮವನ್ನು ಶ್ಲಾಘಿಸಿ ದೀಪಾವಳಿ ಮತ್ತು ಭಾರತೀಯ ಅಮೆರಿಕನ್ನರ ಅಮೂಲ್ಯ ಕೊಡುಗೆಗಳ ಮಹತ್ವವನ್ನು ಎತ್ತಿ ತೋರಿಸಿದರು.

ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಮೊದಲ ಉಪ ವ್ಯವಸ್ಥಾಪಕ ನಿರ್ದೇಶಕಿ ಗೀತಾ ಗೋಪಿನಾಥ್ ಅವರು ಎಕ್ಸ್ ಖಾತೆಯಲ್ಲಿ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ, ಅಮೆರಿಕ ಶ್ವೇತಭವನದಲ್ಲಿ ದೀಪಾವಳಿಯ ಆಚರಣೆ ಮಾಡಿದ ಅಧ್ಯಕ್ಷ ಜೋ ಬೈಡನ್ ಅವರಿಗೆ ಧನ್ಯವಾದಗಳು- ಕತ್ತಲೆಯ ಮೇಲೆ ಬೆಳಕನ್ನು ಮತ್ತು ಅಜ್ಞಾನದ ಮೇಲೆ ಜ್ಞಾನವನ್ನು ಆಚರಿಸುವ ದೀಪಾವಳಿಯ ಶುಭಾಶಯಗಳು! ಎಂದು ಬರೆದಿದ್ದಾರೆ.

ಅಮೆರಿಕದ ಪ್ರಥಮ ಮಹಿಳೆ ಜಿಲ್ ಬಿಡೆನ್ ಮತ್ತು ಅಧ್ಯಕ್ಷ ಜೋ ಬಿಡೆನ್ ಅವರು ಮೊನ್ನೆ ಶ್ವೇತಭವನದಲ್ಲಿ ದೀಪಾವಳಿ ಆಚರಣೆಯನ್ನು ಆಯೋಜಿಸಿ ಅಮೆರಿಕಾದ್ಯಂತ ಇರುವ ಭಾರತೀಯ ಅಮೆರಿಕನ್ನರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. 600ಕ್ಕೂ ಹೆಚ್ಚು ಭಾರತೀಯ ಅಮೆರಿಕನ್ನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅಧ್ಯಕ್ಷನಾಗಿ, ಶ್ವೇತಭವನದಲ್ಲಿ ದೀಪಾವಳಿ ಕಾರ್ಯಕ್ರಮ ಆಯೋಜಿಸಲು ನನಗೆ ಗೌರವವಿದೆ. ಸೆನೆಟರ್, ಉಪಾಧ್ಯಕ್ಷ ಮತ್ತು ಅಧ್ಯಕ್ಷರಾಗಿ; ದಕ್ಷಿಣ ಏಷ್ಯಾದ ಅಮೆರಿಕನ್ನರು ನನ್ನ ಸಿಬ್ಬಂದಿಯ ಪ್ರಮುಖ ಸದಸ್ಯರಾಗಿದ್ದಾರೆ ಎಂದು ಯುಎಸ್ ಅಧ್ಯಕ್ಷರು ದೇಶಾದ್ಯಂತದ ಭಾರತೀಯ ಅಮೇರಿಕನ್ ಕಾಂಗ್ರೆಸ್ ಸದಸ್ಯರು, ಅಧಿಕಾರಿಗಳು ಮತ್ತು ಕಾರ್ಪೊರೇಟ್ ಕಾರ್ಯನಿರ್ವಾಹಕರನ್ನು ಉದ್ದೇಶಿಸಿ ಹೇಳಿದರು.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!