ಮೇಷ
ನೀವು ಬಯಸಿದಂತೆ ದಿನ ಸಾಗದು. ಮನಸ್ಸು ಬೇಸರಗೊಳಿಸುವ ಪ್ರಸಂಗ ಉಂಟಾದೀತು.ಸಂಜೆ ವೇಳೆಗೆ ಮನಸ್ಸು ಸರಿಯಾಗುವುದು, ಉತ್ಸಾಹ ತುಂಬುವುದು.
ವೃಷಭ
ಇಂದಿನ ದಿನ ಉತ್ಸಾಹದಿಂದ ಸಾಗಲಿದೆ. ಕುಟುಂಬ ಸದಸ್ಯರ ಜತೆ ಆತ್ಮೀಯ ಕಾಲಕ್ಷೇಪ. ಸಮಸ್ಯೆಗಳನ್ನು ಮರೆತು ದಿನ ಆನಂದಿಸಿ.
ಮಿಥುನ
ಗುಣಾತ್ಮಕ ದಿನ. ಇತರರಿಗೆ ನೆರವು ನೀಡುವ ಮೂಲಕ ಆತ್ಮತೃಪ್ತಿ. ಮನೆಯಲ್ಲಿ ಕಿರಿಯರಿಂದ ಆನಂದ. ಖರ್ಚು ಹೆಚ್ಚಿದರೂ ಬೇಸರ ಉಂಟಾಗದು.
ಕಟಕ
ಕೆಲ ಕಾರಣಗಳಿಂದಾಗಿ ಭಾವುಕರಾಗುವಿರಿ. ಮನಸ್ಸು ದೃಢ ಮಾಡಿಕೊಳ್ಳಿ. ಕೌಟುಂಬಿಕ ಜಗಳಕ್ಕೆ ಆಸ್ಪದ ಕೊಡಬೇಡಿ. ಸಮಾಧಾನ ಮುಖ್ಯ.
ಸಿಂಹ
ಇತರರ ವರ್ತನೆ ನಿಮ್ಮಲ್ಲಿ ಅಸಹನೆ ತುಂಬಬಹುದು.ಮನಸ್ಸು ಹಾಳು ಕೆಡಿಸಿಕೊಳ್ಳದಿರಿ. ಇಂದಿನ ದಿನ ಆನಂದಿಸಲು ಇರುವುದು.
ಕನ್ಯಾ
ನೆಗೆಟಿವ್ ಚಿಂತನೆ ಮನದಿಂದ ದೂರವಾಗುವುದು.ಮನೆಯಲ್ಲಿ ಶಾಂತಿ, ಸಂತೋಷ.ಕೆಲಸದ ಒತ್ತಡ ನಿವಾರಣೆ. ಬಂಧು ಭೇಟಿ.
ತುಲಾ
ಧಾರ್ಮಿಕ ವಿಚಾರದಲ್ಲಿ ಇಂದು ವ್ಯಸ್ತ. ಕೌಟುಂಬಿಕ ಸಮ್ಮಿಲನ. ಸಣ್ಣ ಪುಟ್ಟ ಸಮಸ್ಯೆ ಬಾಧಿಸಿದರೂ ಅದನ್ನು ಗಂಭೀರವಾಗಿ ಪರಿಗಣಿಸಬೇಡಿ.
ವೃಶ್ಚಿಕ
ಖಾಸಗಿ ಬದುಕಿಗೆ ಹೆಚ್ಚಿನ ಗಮನ ಕೊಡಿ. ಇತರ ವಿಷಯಗಳ ಭರದಲ್ಲಿ ವೈಯಕ್ತಿಕ ಜೀವನ ಕಡೆಗಣಿಸಬೇಡಿ. ಪ್ರೀತಿ ಮತ್ತು ವೃತ್ತಿಯ ಮಧ್ಯೆ ಸಮತೋಲನವಿರಲಿ.
ಧನು
ಯಾವುದೇ ಕೆಲಸ ಬಾಕಿ ಉಳಿಸಬೇಡಿ. ಸಕಾಲದಲ್ಲಿ ಅದನ್ನು ಮುಗಿಸಿರಿ. ಕೌಟುಂಬಿಕ ಸಾಮರಸ್ಯ ಕಾಪಾಡಿ. ಸಣ್ಣ ವಿಷಯಕ್ಕೆ ವಾಗ್ವಾದ ನಡೆಸದಿರಿ.
ಮಕರ
ದೈಹಿಕ ಶ್ರಮ ಅಥವಾ ಮಾನಸಿಕ ಒತ್ತಡದಿಂದ ಅಶಾಂತ ಮನಸ್ಸು. ನಿಮಗೆ ತುಸು ವಿಶ್ರಾಂತಿಯ ಅಗತ್ಯವಿದೆ. ಬಂಧುಗಳ ಸಹಕಾರ.
ಕುಂಭ
ನಿಮ್ಮ ವ್ಯವಹಾರದಲ್ಲಿ ಇತರರು ಮೂಗು ತೂರಿಸಲು ಅವಕಾಶ ಕೊಡದಿರಿ. ಆತ್ಮೀಯರ ಸೋಗಿನಲ್ಲಿರುವ ವಂಚಕರ ಕುರಿತು ಎಚ್ಚರಿಕೆಯಿಂದಿರಿ.
ಮೀನ
ನಿಮ್ಮ ಆದ್ಯತೆಯ ವಿಷಯವನ್ನು ಕಡೆಗಣಿಸಬೇಡಿ. ಕೆಲಸ, ಕುಟುಂಬ ಮತ್ತು ಹೊಣೆಗಾರಿಕೆಯ ಮಧ್ಯೆ ಸರಿಯಾದ ಸಮತೋಲನ ಸಾಧಿಸಿ.