ದೀಪಾವಳಿ, ಸಾಲು ಸಾಲು ರಜೆ…ಊರಿಗೆ ಹೊರಟ ಜನ: ಸಿಲಿಕಾನ್ ಸಿಟಿಯಲ್ಲಿ ಬಸ್ ಸೀಟ್ ಗಾಗಿ ನೂಕುನುಗ್ಗಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೀಪಾವಳಿ ಹಬ್ಬದ ಹಿನ್ನೆಲೆ ಜನ ಬೆಂಗಳೂರಿನಿಂದ ಊರಿಗೆ ತೆರಳುತ್ತಿದ್ದು, ಟೌನ್ ಹಾಲ್ ಕಾರ್ಪೊರೇಷನ್, ಕೆಆರ್ ಮಾರ್ಕೆಟ್, ಮೆಜೆಸ್ಟಿಕ್, ಜೇಸಿ ರಸ್ತೆ, ಮೈಸೂರು ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ.

ಕಳೆದ 2 ಗಂಟೆಯಿಂದಲೂ ವಾಹನ ಸಂಚಾರ ಮಂದಗತಿಯಲ್ಲಿ ಸಾಗಿದೆ. ಟ್ರಾಫಿಕ್ ಜಾಮ್ ಹಿನ್ನಲೆಯಲ್ಲಿ ಎಲ್ಲೆಂದರಲ್ಲಿ ಬೈಕ್ ಸವಾರರು ಯುಟರ್ನ್ ತೆಗೆದುಕೊಳ್ಳುತ್ತಿದ್ದಾರೆ. ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ಎಐ ಸಿಗ್ನಲ್ ಗಳು ಕೆಲಸಕ್ಕೆ ಬಾರದಂತಾಗಿದೆ. ವಾಹನಗಳ ಸಂಚಾರ ನಿಯಂತ್ರಿಸಲು ಪೊಲೀಸ್ ಸಿಬ್ಬಂದಿ ಹರಸಾಹಸ ನಡೆಸಿದ್ದಾರೆ.

ಮೆಜೆಸ್ಟಿಕ್ ಕೆಎಸ್‌ಆರ್ಟಿಸಿ ಟರ್ಮಿನಲ್ 1, 2, 3ರಲ್ಲಿ ಜನಸಂದಣಿ ಭಾರಿ ಉಂಟಾಗಿದೆ. ದೀಪಾವಳಿ ಹಬ್ಬ, ಸಾಲು ಸಾಲು ರಜೆ ಹಿನ್ನೆಲೆ ರಾತ್ರಿ 9 ಗಂಟೆ ಆಗುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಆಗಮಿಸಿದ್ದಾರೆ. ನಿಲ್ದಾಣಕ್ಕೆ ಬಸ್ ಗಳು ಬರುತ್ತಿದ್ದಂತೆ ಸೀಟು ಹಿಡಿಯಲು ಪರದಾಟ ನಡೆಸಿದ್ದಾರೆ. ಕಿಟಕಿಗಳ ಮೂಲಕ ಬ್ಯಾಗ್ ಹಾಕಿ ಪ್ರಯಾಣಿಕರು ಸೀಟು ಹಿಡಿಯುತ್ತಿದ್ದಾರೆ.

ಈಗಾಗಲೇ ಹೆಚ್ಚುವರಿಯಾಗಿ 2,000 ಕೆಎಸ್‌ಆರ್ಟಿಸಿ ಬಸ್ ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದು ಮತ್ತು ನಾಳೆ ಬಿಎಂಟಿಸಿಯಿಂದ 800 ಬಸ್ ಗಳ ವ್ಯವಸ್ಥೆ ಮಾಡಲಾಗಿದೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!