ದೀಪಾವಳಿ ಹಬ್ಬಕ್ಕೆ ಪುಷ್ಪ 2 ಹೊಸ ಫೋಸ್ಟರ್ ರಿಲೀಸ್: ಕ್ಯೂಟ್ ಲುಕ್‌ನಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಈ ಕ್ಷಣ ಸಿನಿ ಅಭಿಮಾನಿಗಳಿಗೆಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅವರು ತಮ್ಮ ಮುಂಬರುವ ಚಿತ್ರ ಪುಷ್ಪ 2: ದಿ ರೈಸ್‌ನ ಹೊಸ ಪೋಸ್ಟರ್ ಬಿಡುಗಡೆ ಮೂಲಕ ಶುಭ ಹಾರೈಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ರಶ್ಮೀಕಾ ಮಂದಣ್ಣ, ತಮ್ಮ ಶ್ರೀವಲ್ಲಿ ಪಾತ್ರದ ಫಸ್ಟ್ ಲುಕ್ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಫೋಸ್ಟರ್ ನಲ್ಲಿ ಅಲ್ಲು-ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಗಂಡ- ಹಂಡತಿ ಪಾತ್ರದಲ್ಲಿ ರೊಮ್ಯಾಂಟಿಕ್ ಲುಕ್ ನಲ್ಲಿದ್ದಾರೆ. ಪುಷ್ಪಾ ರಾಜ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಲ್ಲು ಅರ್ಜುನ್ ಪ್ರೀತಿಯಿಂದ ನೋಡುತ್ತಿರುವುದನ್ನು ಕಾಣಬಹುದು.

‘ನಿಮಗೂ, ನಿಮಗೂ ಕುಟುಂಬಕ್ಕೂ ಪುಷ್ಪ ರಾಜ್, ಶ್ರೀವಲ್ಲಿಯ ದೀಪಾವಳಿ ಶುಭಾಶಯಗಳು. Pushpa2 ಇದೇ ವರ್ಷ ಡಿಸೆಂಬರ್ 5 ರಂದು ವಿಶ್ವದಾದ್ಯಂತ ಗ್ರ್ಯಾಂಡ್ ರಿಲೀಜ್ ಆಗಲಿದೆ ಎಂದು ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ. ಅಲ್ಲು ಅರ್ಜುನ್ ಕೂಡಾ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ದೀಪಾವಳಿ ಹಬ್ಬದ ಶುಭ ಕೋರಿದ್ದಾರೆ.

https://x.com/iamRashmika/status/1851884506065547385?ref_src=twsrc%5Etfw%7Ctwcamp%5Etweetembed%7Ctwterm%5E1851884506065547385%7Ctwgr%5E76b0f7f4e0d189c331b44e4b5831c5e3537f7050%7Ctwcon%5Es1_&ref_url=https%3A%2F%2Fwww.kannadaprabha.com%2Fcinema%2Fnews%2F2024%2FOct%2F31%2Fpushpa-2-allu-arjun-rashmika-mandanna-surprise-fans-with-romantic-poster-on-diwali

ಮೈತ್ರಿ ಮೂವಿ ಮೇಕರ್ಸ್ ಮತ್ತು ಮುತ್ತಂಸೆಟ್ಟಿ ಮೀಡಿಯಾ ನಿರ್ಮಿಸಿರುವ ಈ ಚಿತ್ರದಲ್ಲಿ ಅಲ್ಲು, ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ ಅವರು ಪುಷ್ಪ ರಾಜ್, ಶ್ರೀವಲ್ಲಿ ಮತ್ತು ಭನ್ವರ್ ಸಿಂಗ್ ಶೇಕಾವತ್ ಪಾತ್ರಗಳಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!