ಸಿಎಂ ವಿಚಾರಣೆಯಲ್ಲಿ ಕರ್ತವ್ಯಲೋಪ ಆರೋಪ: ಲೋಕಾಯುಕ್ತ ಎಸ್.ಪಿ ಉದೇಶ್ ವಿರುದ್ಧ ದೂರು ದಾಖಲಿಸಿದ ಸ್ನೇಹಮಯಿ ಕೃಷ್ಣ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿರುವ ಲೋಕಾಯುಕ್ತ ಕಚೇರಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ, ಸತತ 2 ಗಂಟೆಗಳ ಕಾಲ ಲೋಕಾಯುಕ್ತ ವಿಚಾರಣೆಯನ್ನು ಎದುರಿಸಿದರು. ಇದರ ಬೆನ್ನಲ್ಲೇ ಲೋಕಾಯುಕ್ತ ಎಸ್ಪಿ ಆಗಿರುವ ಉದೇಶ್ ವಿರುದ್ಧವೇ ಸ್ನೇಹಮಯಿ ಕೃಷ್ಣ ಅವರು ದೂರು ಸಲ್ಲಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಮೈಸೂರು ಲೋಕಾಯುಕ್ತ ಎಸ್‌ಪಿ ಉದೇಶ್​ ಕರ್ತವ್ಯಲೋಪ ಎಸಗಿದ್ದಾರೆ ಎಚ್ಚರಿಕೆ ನೀಡಿ ಎಂದು ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಿಗೆದೂರು ನೀಡಿದ್ದಾರೆ.

ದೂರಿನಲ್ಲಿ ಪ್ರಕರಣದ A1 ಆರೋಪಿಯ ವಿಚಾರಣೆ ನಡೆಸಬೇಕಿತ್ತು. ಆದರೆ ಅವರನ್ನು ಬಿಟ್ಟು A2, A3 ಹಾಗೂ A4 ವಿಚಾರಣೆ ನಡೆಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ಅಲ್ಲದೇ ಮಹಜರಿನಲ್ಲಿ ಲೋಪ, ದಾಖಲೆ ಅವರ ಬಳಿಯೇ ಇಟ್ಟುಕೊಳ್ಳಬೇಕಿತ್ತು. ಆದರೆ ಅವರ ಬಳಿ ಇಟ್ಟುಕೊಳ್ಳದೇ ಕರ್ತವ್ಯಲೋಪವೆಸಗಿದ್ದಾರೆ. ದಾಖಲೆ ಪತ್ರಕ್ಕೆ ವೈಟ್ನರ್‌ ಹಾಕಿದ ಸಂಬಂಧ ವಿಚಾರಣೆ ನಡೆಸಿಲ್ಲ. ಲೈಟ್‌ ಬಿಟ್ಟವರನ್ನು ವಿಚಾರಣೆ ಮಾಡಿಲ್ಲ, ಈ ಬಗ್ಗೆ ತನಿಖೆ ನಡೆಸಿಲ್ಲ ಎಂದಿದ್ದಾರೆ.

ಸಿಬಿಐಗೆ ವಹಿಸುವಂತೆ ನಾನು ಹಾಕಿದ ಅರ್ಜಿ ಕೋರ್ಟ್​ನಲ್ಲಿ ಬರುತ್ತಿದ್ದಂತೆ ವಿಚಾರಣೆಗೆ ಕರೆದಿದ್ದಾರೆ. ಅವರ ಅಣತಿಯಂತೆ ಸಿಎಂ ಸಿದ್ದರಾಮಯ್ಯನವರೇ 10 ಗಂಟೆಯಿಂದ 12 ಗಂಟೆಯವರೆರೆ ವಿಚಾರಣೆಗೆ ಹಾಜರಾಗುತ್ತೇನೆಂದು ಸಮಯ ನಿಗದಿ ಪಡಿಸಿ ವಿಚಾರಣೆಗೆ ಬಂದಿದ್ದಾರೆ. ಅದೇ ರೀತಿ 10 ರಿಂದ 12 ಗಂಟೆಯವರೆಗೆ ವಿಚಾರಣೆ ನಡೆಸಿ ಮುಗಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!