ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಕೆಲವು ದಿನಗಳಿಂದ ಕರ್ನಾಟಕ ಹಲವು ಜಿಲ್ಲೆಗಳಲ್ಲಿ ವಕ್ಫ್ ಆಸ್ತಿ ವಿವಾದ ಭಾರೀ ಸುದ್ದು ಮಾಡಿದ್ದು, ಈ ಸಂಬಂಧ ರೈತರ ಸಮಸ್ಯೆ ಆಲಿಸಲು ಜಂಟಿ ಸದನ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ನವೆಂಬರ್ 7 ರಂದು ಹುಬ್ಬಳ್ಳಿ ಮತ್ತು ವಿಜಯಪುರಕ್ಕೆ ಭೇಟಿ ನೀಡಿ, ರೈತರೊಂದಿಗೆ ಸಂವಾದ ನಡೆಸಲಿದ್ದಾರೆ.
ಆದರೆ ಇದೀಗ ಇದಕ್ಕೆ ಸಚಿವ ಜಮೀರ್ ಅಹಮ್ಮದ್ ಖಾನ್ ವಿರೋಧ ವ್ಯಕ್ತಪಡಿಸಿದ್ದು, ಅವರು ಬರುತ್ತಿರುವುದು ಅನಧಿಕೃತ. ಡೋಂಟ್ ಟಚ್ ವಕ್ಫ್ ಎಂದು ಗುಡುಗಿದ್ದಾರೆ.
ಜಂಟಿ ಸದನ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ನಾಳೆ ಕರ್ನಾಟಕಕ್ಕೆ ಭೇಟಿ ನೀಡುತ್ತಿರುವ ಬಗ್ಗೆ ಮಾತನಾಡಿರುವ ಜಮೀರ್ ಅಹಮ್ಮದ್ ಖಾನ್, ಪಾರ್ಲಿಮೆಂಟ್ ನಲ್ಲಿ ಬಿಲ್ ತರುವುದಕ್ಕೆ ಕಮಿಟಿ ಮಾಡಿರುವುದು. ಅವರು ಬರುತ್ತಿರುವುದೇ ಅನಧಿಕೃತ. ಜೆಪಿಸಿ ಮಾಡಿರೋದ್ಯಾಕೆ? ವಕ್ಫ್ ಬಿಲ್ಗೆ ಎಂದು ಮಾಡಿರುವುದು ಎಂದರು.
ಪಾರ್ಲಿಮೆಂಟ್ ನಲ್ಲಿ ವಕ್ಫ್ ಬಿಲ್ ತರುತ್ತಿದ್ದಾರೆ. ಅದಕ್ಕೆ ಅಂತಾ ಕಮಿಟಿ ಮಾಡುತ್ತಿದ್ದಾರೆ. ಇದಕ್ಕಲ್ಲ. ಇದರಲ್ಲಿ ಅವರು ಹೇಗೆ ಬರೋಕೆ ಆಗುತ್ತೆ? ಕೇಂದ್ರಕ್ಕೆ ಪವರ್ ಇದೆ, ಅದಕ್ಕೆ ಅಂತ ಸಪ್ರೇಟ್ ಕಮಿಟಿ ಮಾಡುಬೇಕು ಅಲ್ವಾ? ಕರ್ನಾಟಕದಲ್ಲಿ ಗೊಂದಲ ಆಗಿದೆ ಅಂತ ಕಮಿಟಿ ಮಾಡಲಿ ಎಂದು ಹೇಳಿದರು.
ನಾಳೆ ರಾಜ್ಯಕ್ಕೆ ಜಗದಾಂಬಿಕಾ ಪಾಲ್
ರಾಜ್ಯದಲ್ಲಿ ವಕ್ಫ ವಿವಾದ ಬುಗಿಲೆದ್ದ ಹಿನ್ನಲೆಯಲ್ಲಿ ಬಿಜೆಪಿ ನಾಯಕರು ಬರೆದಿದ್ದ ಪತ್ರಕ್ಕೆ ಜಾಯಿಂಟ್ ಪಾರ್ಲಿಮೆಂಟ್ ಕಮಿಟಿ ಸ್ಪಂದಿಸಿದ್ದು, ನಾಳೆ(ನವೆಂಬರ್ 07) ಜಂಟಿ ಸದನ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ಮೊದಲು ಹುಬ್ಬಳ್ಳಿಗೆ ಭೇಟಿ ನೀಡಲಿದ್ದಾರೆ.