May 27, 2026
Wednesday, May 27, 2026
spot_img

FOOD | ಇಂದೇ ಟ್ರೈ ಮಾಡಿ ಕ್ಯಾರೆಟ್‌ ರೈಸ್‌ ಬಾತ್‌, ಟೇಸ್ಟ್‌ ಮಾತ್ರ ಸೂಪರ್‌

ಸಾಮಾಗ್ರಿಗಳು

ಕ್ಯಾರೇಟ್- 2
ಈರುಳ್ಳಿ- 1
ಹಸಿ ಮೆಣಸಿನಕಾಯಿ- 4
ಕರಿಬೇವು- ಸ್ವಲ್ಪ
ಕೊತ್ತಂಬರಿ ಸೊಪ್ಪು- ಸ್ವಲ್ಪ
ಲಿಂಬೆಹಣ್ಣಿನ ರಸ- ಸ್ವಲ್ಪ
ಶುಂಠಿ- ಸ್ವಲ್ಪ
ಎಣ್ಣೆ- ಸ್ವಲ್ಪ
ಉದ್ದಿನಬೇಳೆ- ಸ್ವಲ್ಪ
ಸಾಸಿವೆ-ಸ್ವಲ್ಪ
ಕಡಲೆಬೀಜ- ಸ್ವಲ್ಪ
ಅರಿಶಿಣ- ಸ್ವಲ್ಪ
ಉಪ್ಪು- ರುಚಿಗೆ ತಕ್ಕಷ್ಟು

ಕ್ಯಾರೆಟ್ ನ ಸಿಪ್ಪೆ ತೆಗೆದುಕೊಂಡು ತುರಿದುಕೊಳ್ಳಬೇಕು. ನಂತರ ಒಂದು ಬಾಣಲೆಗೆ ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಕಡಲೆಬೀಜ, ಹಸಿ ಮೆಣಸಿನಕಾಯಿ, ಶುಂಠಿ, ಅರಿಶಿಣ, ಕರಿಬೇವು ಹಾಕಿ ಒಗ್ಗರಣೆ ಸಿದ್ಧ ಮಾಡಿಕೊಳ್ಳಬೇಕು. ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಗೂ ಕ್ಯಾರೆಟ್ ತುರಿಯನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ.

ಕ್ಯಾರೆಟ್ ಚೆನ್ನಾಗಿ ಹುರಿದ ನಂತರ ಅನ್ನ, ಉಪ್ಪು, ಲಿಂಬೆ ರಸ ಹಾಗೂ ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಕಲಸಬೇಕು. ಇದೀಗ ರುಚಿಕರವಾದ ಕ್ಯಾರೆಟ್ ಬಾತ್ ಸವಿಯಲು ಸಿದ್ಧ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !