ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇರಾನ್ ಅಮೆರಿಕದ ನಾಯಕನನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾದರೆ, ಆ ದೇಶವನ್ನು ಈ ಭೂಮಿಯಿಂದಲೇ ಅಳಿಸಿಹಾಕಲಾಗುವುದು ಎಂಬ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ನ್ಯೂಸ್ ನೇಷನ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಇರಾನ್‌ನ ಕೊಲೆ ಬೆದರಿಕೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆಂತರಿಕ ದಂಗೆಯಲ್ಲಿ ಅಮೆರಿಕದ ಪಾತ್ರದ ಆರೋಪ ಮಾಡಿದ್ದ ಇರಾನ್, ಡೊನಾಲ್ಡ್ ಟ್ರಂಪ್ ಅವರಿಗೆ ಕೊಲೆ ಬೆದರಿಕೆ ಹಾಕಿತ್ತು. ‘ಈ ಬಾರಿ ಬುಲೆಟ್ ಮಿಸ್ ಆಗಲ್ಲ’ ಎಂಬ ಇರಾನ್ ಬೆದರಿಕೆ ಜಾಗತಿಕ ಮಟ್ಟದಲ್ಲಿ ಭಾರೀ ಸದ್ದು ಮಾಡಿತ್ತು. ಇದಕ್ಕೆ ಪೂರಕವಾಗಿ ಟ್ರಂಪ್ ಕೂಡ, ‘ನನಗೆ ದೃಢವಾದ ಮುನ್ಸೂಚನೆಗಳು ಸಿಕ್ಕಿವೆ, ಏನು ಬೇಕಾದರೂ ಆಗಬಹುದು’ ಎಂದು ಸೂಚ್ಯವಾಗಿ ಹೇಳಿದ್ದಾರೆ.
ಇರಾನ್‌ನ ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಹೇಳಿರುವ ಅಮೆರಿಕ ಅಧ್ಯಕ್ಷ, ‘ಒಂದು ವೇಳೆ ಇರಾನ್ ನನ್ನನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾದರೆ, ಅಮೆರಿಕವು ಈ ಭೂಮಿಯ ಮೇಲೆ ಆ ದೇಶದ ಅಸ್ತಿತ್ವದ ಕುರುಹು ನಾಶ ಮಾಡಲಿದೆ’ ಎಂದು ಗುಡುಗಿದ್ದಾರೆ. ಟ್ರಂಪ್ ಅವರ ಈ ಹೇಳಿಕೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.


