ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಚಳಿಗಾಲದ ಪ್ರಭಾವ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ವಾಯು ಗುಣಮಟ್ಟ ಗಮನಾರ್ಹವಾಗಿ ಕುಸಿದಿದೆ. ತಣ್ಣನೆಯ ಗಾಳಿಯ ವೇಗ ಕಡಿಮೆಯಾಗಿರುವುದು ಮತ್ತು ಮುಂಜಾನೆಯ ದಟ್ಟ ಮಂಜು ಮಾಲಿನ್ಯಕಾರಕ ಕಣಗಳನ್ನು ಭೂಮಿಗೆ ಹತ್ತಿರದಲ್ಲೇ ಹಿಡಿದಿಡುತ್ತಿವೆ. ಇದರಿಂದಾಗಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ವಾಯು ಮಾಲಿನ್ಯದ ಪ್ರಮಾಣ ಏರಿಕೆಯಾಗಿದೆ.
ಸಿಲ್ಕ್ ಬೋರ್ಡ್ ಮತ್ತು ವೈಟ್‌ಫೀಲ್ಡ್ ಭಾಗದಲ್ಲಿ ವಾಯು ಗುಣಮಟ್ಟ ಸೂಚ್ಯಂಕ 150ರ ಗಡಿ ದಾಟಿದ್ದು, ಇದು ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ಅತ್ಯಂತ ಅಪಾಯಕಾರಿ ಎನ್ನಲಾಗಿದೆ.
ಹಸಿರಿನಿಂದ ಕೂಡಿರುವ ಜಯನಗರ ಮತ್ತು ಲಾಲ್‌ಬಾಗ್ ಪ್ರದೇಶಗಳಲ್ಲಿ ಗಾಳಿಯ ಮಟ್ಟ 85 ರಿಂದ 95ರಷ್ಟಿದ್ದು, ಪರಿಸ್ಥಿತಿ ಸಾಧಾರಣವಾಗಿದೆ.
ಇಂದು ಬೆಂಗಳೂರಿನ ಒಟ್ಟು ವಾಯು ಗುಣಮಟ್ಟ 110 ರಿಂದ 135ರ ಆಸುಪಾಸಿನಲ್ಲಿ ಇರಲಿದೆ.
ಮೈಸೂರಿನಲ್ಲಿ 65-80 ಹಾಗೂ ಮಂಗಳೂರಿನಲ್ಲಿ 55-70 AQI ದಾಖಲಾಗಿದ್ದು, ಈ ನಗರಗಳಲ್ಲಿ ವಾತಾವರಣ ಹಿತಕರವಾಗಿದೆ.
ಹುಬ್ಬಳ್ಳಿ-ಧಾರವಾಡ: ಜನದಟ್ಟಣೆ ಮತ್ತು ಕಾಮಗಾರಿಗಳ ಕಾರಣದಿಂದ ಇಲ್ಲಿನ ಸೂಚ್ಯಂಕ 90 ರಿಂದ 115ಕ್ಕೆ ಏರಿದೆ.
ಕಲಬುರಗಿ: ಇಲ್ಲಿ ಗಾಳಿಯ ಗುಣಮಟ್ಟ 105 ರಿಂದ 120ರವರೆಗೆ ಇರಲಿದ್ದು, ಜನರಲ್ಲಿ ಆತಂಕ ಮೂಡಿಸಿದೆ.


