October 16, 2026
Friday, October 16, 2026
spot_img

ಆಫ್ಘನ್‌ ಮೇಲೆ ಪಾಕ್‌ ಏರ್‌ಸ್ಟ್ರೈಕ್‌ : ರಂಜಾನ್‌ ಸಮಯದಲ್ಲೇ ದಾಳಿ ನಡೆದಿದ್ದಕ್ಕೆ ತಾಲಿಬಾನ್‌ ಗರಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಒಂದು ಕಡೆ ಇಸ್ರೇಲ್‌ -ಇರಾನ್‌ ಮಧ್ಯೆ ವಾರ್‌ ನಡೆಯುತ್ತಿದ್ದರೆ ಇನ್ನೊಂದು ಕಡೆ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ನಡುವೆಯೂ ಕಾದಾಟ ಮಿತಿಮೀರಿದೆ.

ಇಂದು ಬೆಳಗ್ಗೆ ಕಾಬೂಲ್, ಕಂದಹಾರ್, ಪಕ್ತಿಯಾ, ಪಕ್ತಿಕಾ ಸೇರಿದಂತೆ ಇತರೇ ಪ್ರದೇಶಗಳ ಮೇಲೆ ಮತ್ತೆ ಪಾಕಿಸ್ತಾನ ಏರ್‌ಸ್ಟ್ರೈಕ್‌ ಮಾಡಿದೆ. ಕಂದಹಾರ್ ವಿಮಾನ ನಿಲ್ದಾಣದ ಬಳಿ ಇಂಧನ ಡಿಪೋ ಮೇಲೆ ದಾಳಿ ನಡೆಸಿದೆ ಎಂದು ತಾಲಿಬಾನ್ ವಕ್ತಾರ ಆರೋಪಿಸಿದ್ದಾರೆ.

ಕಂದಹಾರ್ ವಿಮಾನ ನಿಲ್ದಾಣದ ಬಳಿ ಖಾಸಗಿ ವಿಮಾನಯಾನ ಸಂಸ್ಥೆ ಕಾಮ್ ಏರ್‌ಗೆ ಸೇರಿದ ಇಂಧನ ಸಂಗ್ರಹಣಾ ಸೌಲಭ್ಯವನ್ನು ಪಾಕಿಸ್ತಾನದ ಮಿಲಿಟರಿ ವಿಮಾನಗಳು ಹೊಡೆದಿವೆ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಆರೋಪಿಸಿದ್ದಾರೆ.

ಪಾಕಿಸ್ತಾನದ ಮಿಲಿಟರಿ ಪಡೆಗಳು ಕೆಲವು ಪ್ರದೇಶಗಳಲ್ಲಿ ನಾಗರಿಕರ ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿ ಮಹಿಳೆಯರು ಮತ್ತು ಮಕ್ಕಳನ್ನು ಹತ್ಯೆ ಮಾಡಿದೆ. ಪವಿತ್ರ ರಂಜಾನ್ ತಿಂಗಳ ಅಂತಿಮ ದಿನಗಳಲ್ಲಿ ಮತ್ತು ಈದ್ ಮುನ್ನಾದಿನದಂದು ಇಂತಹ ಕ್ರೂರ ಆಕ್ರಮಣಕಾರಿ ಕೃತ್ಯ ಪಾಕಿಸ್ತಾನ ಯಾವುದೇ ಮಾನವ ತತ್ವಗಳು ಅಥವಾ ನೈತಿಕ ಮೌಲ್ಯಗಳಿಗೆ ಬದ್ಧವಾದ ದೇಶವಲ್ಲ ಎನ್ನುವುದನ್ನು ತೋರಿಸುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

Must Read