ಫೆಂಗಲ್‌ ಚಂಡಮಾರುತ ಅಬ್ಬರ | ಲ್ಯಾಂಡ್‌ ಆಗಲು ಹರಸಾಹಸ ಪಟ್ಟು ಮತ್ತೆ ಹಾರಿದ ವಿಮಾನ: ವಿಡಿಯೋ ವೈರಲ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫೆಂಗಲ್‌ ಚಂಡಮಾರುತದಿಂದ ಚೆನ್ನೈನಲ್ಲಿ ಭಾರೀ ಮಳೆಯಾಗುತ್ತಿದ್ದು, ಈಗಾಗಲೇ ಹಲವಾರು ವಿಮಾನಗಳು ರದ್ದುಗೊಳಿಸಲಾಗಿದೆ. ಇತ್ತ ಫೆಂಗಲ್ ಎಫೆಕ್ಟ್​ಗೆ ಗಾಳಿ ವೇಗವಾಗಿ ಬೀಸುತ್ತಿದ್ದು, ಚೆನ್ನೈನಲ್ಲಿ ವಿಮಾನ ಲ್ಯಾಂಡ್ ಆಗಲು ಹರಸಾಹಸ ಪಟ್ಟಿದೆ.

ಚೆನ್ನೈ ಅಂತಾರಾಷ್ಟ್ರಿಯ ಏರ್‌ಪೋರ್ಟ್‌ನಲ್ಲಿ ಇಂಡಿಗೋ ಪೈಲಟ್‌ ವಿಮಾನವನ್ನು ಲ್ಯಾಂಡ್ ಮಾಡಲು ಪರದಾಡಿದ್ದಾರೆ. ಫ್ಲೈಟ್ ಲ್ಯಾಂಡ್ ಮಾಡುವಾಗ ಸಮಸ್ಯೆ ಎದುರಾಗಿದ್ದು, ತಕ್ಷಣವೇ ಲ್ಯಾಂಡಿಂಗ್ ಅಬಾರ್ಟ್ ಮಾಡಿ ಮತ್ತೆ ಹಾರಾಟ ಮಾಡಲಾಗಿದೆ. ಕೆಲ ಕ್ಷಣಗಳ ಬಳಿಕ ಇಂಡಿಗೋ ಪೈಲಟ್‌ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ್ದು, ಮೈಜುಮ್ಮೆನ್ನಿಸುವ ದೃಶ್ಯ ಸೆರೆಯಾಗಿದೆ.

https://x.com/airwaysmagazine/status/1863115185927389250?ref_src=twsrc%5Etfw%7Ctwcamp%5Etweetembed%7Ctwterm%5E1863115185927389250%7Ctwgr%5Eda5131581c737a314fde61e244fd53258c465fcc%7Ctwcon%5Es1_&ref_url=https%3A%2F%2Fnewsfirstlive.com%2Fthe-scrambling-scene-to-land-the-plane-in-chennai-was-captured%2F

ಇಂಡಿಗೋ ವಿಮಾನಯಾನ ಸಂಸ್ಥೆ ಈ ಘಟನೆಯನ್ನು ದೃಢಪಡಿಸಿದೆ. ವಿಮಾನವನ್ನು ಇಳಿಸಲು ಸಾಧ್ಯವಾಗದೆ ಇರುವ ಸಂದರ್ಭದಲ್ಲಿ ಮತ್ತೆ ಹಾರಿಸುವ ಪ್ರಕ್ರಿಯೆಗೆ ಗೋ-ರೌಂಡ್‌ ಎನ್ನಲಾಗತ್ತದೆ. ಇದನ್ನು ಸಾಮಾನ್ಯವಾಗಿ ಸುರಕ್ಷಿತ ಲ್ಯಾಂಡಿಂಗ್ ಸಾಧಿಸಲು ಸಾಧ್ಯವಾಗದಿದ್ದಾಗ ಮಾಡಲಾಗುತ್ತದೆ. ಇಂತಹ ಕೌಶಲ್ಯವನ್ನು ಪೈಲಟ್‌ಗಳು ತುರ್ತು ಸಂದರ್ಭಗಳನ್ನು ನಿಭಾಯಿಸಲು ಸೂಕ್ತ ತರಬೇತಿ ಪಡೆದಿದ್ದಾರೆ ಎಂದು ಏರ್‌ಲೈನ್ಸ್ ಸ್ಪಷ್ಟಪಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!