11 ತಿಂಗಳಲ್ಲಿ ವಿಮಾನಯಾನ ಸಂಸ್ಥೆಗಳಿಗೆ ಬಂತು ಬರೋಬ್ಬರಿ 999 ಹುಸಿ ಬಾಂಬ್ ಬೆದರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜನವರಿ 2024 ರಿಂದ ನವೆಂಬರ್ 14 ರವರೆಗೆ ವಿಮಾನಯಾನ ಸಂಸ್ಥೆಗಳಿಗೆ ಒಟ್ಟು 999 ಹುಸಿ ಬಾಂಬ್ ಬೆದರಿಕೆಗಳ ಬಂದಿವೆ. ಈ ಪೈಕಿ ಅಕ್ಟೋಬರ್‌ನಲ್ಲಿಯೇ ವಿಮಾನಯಾನ ಸಂಸ್ಥೆಗಳಿಗೆ 666 ಹುಸಿ ಬಾಂಬ್ ಬೆದರಿಕೆಗಳು ಬಂದಿವೆ ಎಂದು ಕೇಂದ್ರ ಸರಕಾರ ಹೇಳಿದೆ.

ಈ ಕುರಿತು ಸೋಮವಾರ ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಅವರು, ಹುಸಿ ಬಾಂಬ್ ಬೆದರಿಕೆಗಳು ವಿಮಾನಯಾನ ಸಂಸ್ಥೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಬೆದರಿಕೆಗಳು ವಿಮಾನಗಳ ಕಾರ್ಯಾಚರಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ ಎಂದು ಹೇಳಿದರು.

ಜನವರಿ 2024 ರಿಂದ ನವೆಂಬರ್ 14, 2024 ರ ಅವಧಿಯಲ್ಲಿ ಒಟ್ಟು 999 ಹುಸಿ ಬಾಂಬ್ ಬೆದರಿಕೆ ಪ್ರಕರಣಗಳು ವರದಿಯಾಗಿವೆ ಎಂದು ಸಚಿವರು ಪ್ರತ್ಯೇಕ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಸಚಿವರು ಹಂಚಿಕೊಂಡ ಮಾಹಿತಿಯ ಪ್ರಕಾರ, ಒಟ್ಟು 666 ಘಟನೆಗಳು ಅಕ್ಟೋಬರ್‌ನಲ್ಲಿ ಮತ್ತು ನವೆಂಬರ್ ನಲ್ಲಿ 14 ರವರೆಗೆ 52 ಪ್ರಕರಣಗಳು ವರದಿಯಾಗಿವೆ.

ಜನವರಿಯಲ್ಲಿ 11, ಫೆಬ್ರವರಿಯಲ್ಲಿ 17, ಮಾರ್ಚ್‌ನಲ್ಲಿ 5, ಏಪ್ರಿಲ್‌ನಲ್ಲಿ 60, ಮೇನಲ್ಲಿ 26, ಜೂನ್‌ನಲ್ಲಿ 116, ಜುಲೈ 10, ಆಗಸ್ಟ್‌ನಲ್ಲಿ, 21 ಮತ್ತು ಸೆಪ್ಟೆಂಬರ್‌ನಲ್ಲಿ 15 ಹುಸಿ ಬಾಂಬ್ ಬೆದರಿಕೆ ಕರೆಗಳು ಬಂದಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!