February 25, 2026
Wednesday, February 25, 2026
spot_img

ಸಕ್ಕರೆ ನಗರಿಯಲ್ಲಿ ನಾಳೆಯಿಂದ ಫಲಪುಷ್ಪ ಪ್ರದರ್ಶನ: ಜನರನ್ನು ಆಕರ್ಷಿಸುತ್ತಿದೆ ಹೂವಿನ ಕಲಾಕೃತಿಗಳು!

ಹೊಸದಿಗಂತ ವರದಿ, ಮಂಡ್ಯ :

ಸಕ್ಕರೆ ನಗರಿ ಮಂಡ್ಯದಲ್ಲಿ ನಾಳೆಯಿಂದ ಐದು ದಿನಗಳ ಕಾಲ ವಿಭಿನ್ನ, ವಿಶೇಷ ರೀತಿಯ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಮೂರು ದಿನಗಳ ರಜಾ ದಿನಗಳ ಮಜಾದೊಂದಿಗೆ ಫಲಪುಷ್ಪ ಪ್ರದರ್ಶನವನ್ನು ಜನತೆ ಸವಿಯಲಿದ್ದಾರೆ.

ಹಲವು ವೈವಿಧ್ಯಮಯ ಪುಷ್ಪಗಳು ನಗರದ ಜನತೆಯನ್ನು ಕೈ ಬೀಸಿ ಕರೆಯುತ್ತವೆ. ಜೊತೆಗೆ ವಿವಿಧ ಇಲಾಖೆಗಳ ಸರ್ಕಾರದ ಯೋಜನೆಗಳನ್ನೂ ಸಹ ಜನರಿಗೆ ತಿಳಿಸಲು ಹೂವಿನ ಕಲಾಕೃತಿಗಳು ಸಿದ್ಧವಾಗಿವೆ.

ಇತ್ತೀಚೆಗೆ ವಿಶ್ವಕಪ್ ಗೆದ್ದ ಮಹಿಳಾ ತಂಡ ಮತ್ತು ಅಂದ ಕ್ರಿಕೆಟ್ ಮಹಿಳಾ ತಂಡದ ಹೂವಿನ ಕಲಾಕೃತಿಗಳೂ ಸಹ ಕ್ರೀಡಾಭಿಮಾನಿಗಳ ಗಮನ ಸೆಳೆಯಲಿದ್ದು, ಸಾಲಮರದೊಂದಿಗೆ ವಿಭಿನ್ನ ಶೈಲಿಯಲ್ಲಿ ಮೂಡಿರುವ ಸಾಲುವರದ ತಿಮ್ಮಕ್ಕ, ಅಕ್ಕನ ಮನೆಯ ಮೀನೂಟದ ಸವಿಯ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಬಗೆಯ ಆಹಾರ ತಿನಿಸುಗಳು ಜನರನ್ನು ಆಕರ್ಷಿಸುತ್ತಿವೆ.

ನಾಳೆ ಬೆಳಗ್ಗೆ 8.30ಕ್ಕೆ ಕೃಷಿ ಸಚಿವರು ಚಾಲನೆ ನೀಡುವ ಪ್ರದರ್ಶನವನ್ನು ವೀಕ್ಷಿಸಲು ಸಾಲು ಸಾಲು ರಜೆಗಳ ನಡುವೆ ಸರ್ಕಾರಿ ನೌಕರರು, ಮಕ್ಕಳು ಭೇಟಿ ನೀಡಲಿದ್ದಾರೆ ಎಂಬ ವಿಶ್ವಾಸ ಜಿ.ಪಂ. ಸಿಇಓ ಕೆ.ಆರ್. ನಂದಿನಿ ಮತ್ತು ಅಧಿಕಾರಿಗಳದ್ದಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !