ಯಾರು ಬೇಕಾದ್ರೂ ದೆಹಲಿಗೆ ಹೋಗಿ ಜೆಪಿಸಿಸಿ ಮುಖ್ಯಸ್ಥರನ್ನು ಭೇಟಿ ಮಾಡಬಹುದು: ವಿಜಯೇಂದ್ರ

ಹೊಸದಿಗಂತ ವರದಿ ಕಲಬುರಗಿ:

ಬಸವನಗೌಡ ಪಾಟೀಲ್ ಯತ್ನಾಳ್ ಅಲ್ಲ. ರೈತರ ಪರವಾಗಿ ಯಾರೂ ಬೇಕಾದರೂ ಹೋಗಿ ಜೆಪಿಸಿಸಿ,ನ ಭೇಟಿ ಮಾಡಬಹುದು. ನಾವು ಕೂಡ ಪಕ್ಷದ ವತಿಯಿಂದ ಸಂಪೂರ್ಣವಾಗಿ ವರದಿ ನೀಡಿದ್ದು,ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಸಮಸ್ಯೆಗಳ ಕುರಿತು ಯಾರು ಬೇಕಾದರೂ ದೆಹಲಿಗೆ ಜೆಪಿಸಿಸಿ ಮುಖ್ಯಸ್ಥರನ್ನು ಹೋಗಿ ಭೇಟಿ ಮಾಡಬಹುದು ಅದಕ್ಕೆ ನಮ್ಮದೇನೂ ತಕರಾರಿಲ್ಲ ಎಂದು ಹೇಳಿದರು.

ಇಡಿ ರಾಜಕೀಯ ಪ್ರೇರಿತವಾಗಿ ಕಾಂಗ್ರೆಸ್ ಮುಖಂಡರನ್ನು ಟಾರ್ಗೆಟ್ ಮಾಡುತ್ತಿದೆ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರಿಂದ ಈ ಹೇಳಿಕೆ ನಿರೀಕ್ಷೆ ಮಾಡಬಹದಾ? ಎಂದು ಪ್ರಶ್ನಿಸಿದ ಅವರು, ಬಿಜೆಪಿ ಮುಡಾ ಬಗ್ಗೆ ಸದನದಲ್ಲಿ ಚರ್ಚೆ ಮಾಡಬೇಕು ಅಂದ್ರೆ ದೇಸಾಯಿ ಕಮಿಟಿ ರಚನೆಯಾಗಿದೆ ಎಂದು ಚರ್ಚೆಗೆ ಅವಕಾಶ ಕೊಟ್ಟಿಲ್ಲ.ಹೀಗಾಗಿ ನಾವು ಜೆಡಿಎಸ್ ನೊಂದಿಗೆ ಸೇರಿ ಮೈಸೂರಿಗೆ ಜನಾಂದೋಲನ ಮಾಡಿದ್ದೇವೆ ಎಂದರು.

ಮುಡಾ ಅಕ್ರಮ ಮುಖ್ಯಮಂತ್ರಿ ಕುಟುಂಬದ ೧೪ ನಿವೇಶನಗಳಿಗೆ ಮಾತ್ರ ಸಿಮೀತವಾಗಿಲ್ಲ. ೧೪ ನಿವೇಶನದ ಸಾವಿರಾರು ಕೋಟಿ ಬೆಲೆ ಬಾಳುವ ನಿವೇಶನ ಬ್ರೋಕರ್ ಪಾಲಾಗಿದೆ.ಈ ಕುರಿತು ಲೋಕಾಯುಕ್ತ ಯಾವ ರೀತಿ ತನಿಖೆ ನಡೆಸುತ್ತಿದೆ ಎಂಬುದು ನಮಗೆ ಗೊತ್ತಿರುವ ವಿಚಾರವಾಗಿದ್ದು, ಮುಖ್ಯಮಂತ್ರಿ ಭಾವ ಮೈದ ರಾತ್ರೋ ರಾತ್ರಿ ಹೋಗಿ ಲೋಕಾಯುಕ್ತ ತನಿಖಾಧಿಕಾರಿಗಹನ್ನು ಭೇಟಿ ಮಾಡಿ ಬರುತ್ತಿದ್ದಾರೆ ಎಂದು ಹೇಳಿದರು.

ಇಡಿ ಇದೀಗ ಮೊದಲ ಹಂತದಲ್ಲಿ ೭೦೦ ಕೋಟಿಗೂ ಹೆಚ್ಚಿನ ಹಣ ಹಗರಣ ಆಗಿದೆ ಎಂದು ಹೇಳಿದ್ದು,ಇದನ್ನು ಸಿಎಂ ಸಿದ್ದರಾಮಯ್ಯ ಅವರು ನಾವು ರಾಜಕೀಯ ಪ್ರೇರಿತವಾಗಿ ಮಾತನಾಡುತ್ತಿದ್ದೇವೆ ಅಂತ ಹೇಳಿದ್ದಾರೆ.ಆದರೆ, ಮುಖ್ಯಮಂತ್ರಿ ಧರ್ಮಪತ್ನಿ ಅವರು ಸಿಎಂ ಮನೆಯಲ್ಲೆ ಕೂತು ಮುಖ್ಯಮಂತ್ರಿ ಅವರಿಗೆ ಗೊತ್ತಿಲ್ಲದೆ ನಿವೇಶನ ವಾಪಸ್ ಕೊಟ್ಟಿದ್ದಾರೆ ಎಂದ ಅವರು, ಕದ್ದಿರುವ ಮಾಲ್,ನ್ನು ವಾಪಸ್ ಕೊಟ್ಟರೆ ಆರೋಪದಿಂದ ಮುಕ್ತಿ ಹೊಂದುವುದಿಲ್ಲ ಎಂದು ಹೇಳಿದರು..

ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಎಸ್.ಟಿ.ಸೋಮಶೇಖರ್ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿದ್ದಾರೆ ಎಂಬ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಡಿಸೆಂಬರ್ ೭ರಂದು ಬಿಜೆಪಿ ಕೋರ್ ಕಮಿಟಿ ಸಭೆಯಿದ್ದು, ಎಲ್ಲವೂ ಅದರಲ್ಲಿ ಚರ್ಚೆ ಆಗಲಿದೆ. ಮುಖಂಡರು ಯಾರು ಎಷ್ಟೇ ದೊಡ್ಡವರಿದ್ದರು ಅವರ ವಿರುದ್ಧ ಪಕ್ಷ ಕ್ರಮಕೈಗೊಳ್ಳಲಿದೆ ಎಂದ ಅವರು, ಯತ್ನಾಳ್ ಅವರಿಗೆ ನೋಟಿಸ್ ನೀಡಲಾಗಿದ್ದು, ಹೈಕಮಾಂಡ್ ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!