ಎಲ್ಲರಿಗೂ ಹೈಜಿನ್ ಅನ್ನೋದು ತುಂಬಾನೇ ಮುಖ್ಯ. ಇನ್ನೊಬ್ಬರಿಗೆ ಮುಜುಗರ ಆಗುತ್ತದೆ ಅಂತಲ್ಲ, ನಿಮ್ಮ ಆರೋಗ್ಯಕ್ಕಾಗಿ ಶುಚಿಯಾಗಿರಲೇಬೇಕು. ಅದರಲ್ಲಿಯೂ ಪೀರಿಯಡ್ಸ್ ಸಮಯದಲ್ಲಿ ಮಹಿಳೆಯರು ಸಾಕಷ್ಟು ಹೈಜಿನ್ ಮೇಂಟೆನ್ ಮಾಡಬೇಕು. ಇಲ್ಲವಾದರೆ ಗಂಭೀರ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ನಿಮ್ಮ ಟೀನೇಜ್ ಮಕ್ಕಳಿದ್ದರೆ ಅವರಿಗೂ ಈ ಮಾಹಿತಿ ನೀಡಿ..
ಪ್ರತೀ ಆರರಿಂದ ಎಂಟುಗಂಟೆಯ ಒಳಗೆ ಪ್ಯಾಡ್ ಬದಲಾಯಿಸಿ, ಬ್ಲೀಡಿಂಗ್ ಜಾಸ್ತಿ ಇದ್ದರೆ ನಾಲ್ಕು ಗಂಟೆಗೊಮ್ಮೆ ಬದಲಾಯಿಸಿ.
ಪಿರಿಯಡ್ಸ್ ಸಮಯದಲ್ಲಿ ಸ್ನಾನ ಸ್ಕಿಪ್ ಮಾಡಬೇಡಿ. ತಲೆ ಸ್ನಾನ ಅವಾಯ್ಡ್ ಮಾಡಿದರೆ ಒಳ್ಳೆಯದು.
ಬಳಸಿದ ನಿಮ್ಮ ಪ್ಯಾಡ್‌ನ್ನು ಕವರ್‌ನಲ್ಲಿ ಹಾಕಿ ಡಸ್ಟ್‌ಬಿನ್‌ಗೆ ಎಸೆಯಿರಿ ಅಥವಾ ಪಿರಿಯಡ್ಸ್ ಮುಗಿಯುವವರೆಗೂ ಒಂದು ಕವರ್‌ಗೆ ಹಾಕಿ ನಂತರ ಎಸೆಯಿಡಿ
ಪ್ರತೀ ಬಾರಿ ಖಾಸಗಿ ಅಂಗಗಳನ್ನು ಮುಟ್ಟಿಕೊಂಡಾಗ ಅಥವಾ ಪ್ಯಾಡ್ ಬದಲಾಯಿಸಿದಾಗ ಸ್ಯಾನಿಟೈಸರ್ ಹಾಕಿ ಇಲ್ಲವೇ ಹ್ಯಾಂಡ್‌ವಾಶ್ ಬಳಸಿ.
ಪಿರಿಡಯ್ಸ್ ಸಮಯದಲ್ಲಿ ಹೊರಗೆ ಹೋಗುವಾಗ ಎಕ್ಸ್ಟ್ರಾ ಪ್ಯಾಂಟಿ, ಪ್ಯಾಡ್, ಡಿಸ್ಪೋಸಲ್ ಕವರ್ ಹಾಗೂ ಬಟ್ಟೆ ಇಟ್ಟುಕೊಳ್ಳಿ.
ನಿಮ್ಮ ಪೀರಿಯಡ್ಸ್ ಸೈಕಲ್ ಮೇಲೆ ಗಮನ ಇರಲಿ, ರಕ್ತದ ಬಣ್ಣದ ಮೇಲೂ ಗಮನ ಇಡಿ. ಕೆಟ್ಟ ವಾಸನೆ ಎನಿಸಿದರೆ ವೈದ್ಯರನ್ನು ಭೇಟಿ ಮಾಡಿ.
ಬಾತ್‌ರೂಮ್‌ಗೆ ಹೋಗಿ ಬಂದ ನಂತರ ಕಮೋಡ್‌ನ್ನು ಇನ್ನೊಮ್ಮೆ ಚೆಕ್ ಮಾಡಿ, ಸ್ಟೇನ್ಸ್ ಹಾಗೆ ಇದ್ದರೆ ಇತರರಿಗೆ ಮುಜುಗರ ಆಗಬಹುದು.
ಮಲಗುವ ವೇಳೆ ಎಕ್ಸ್ಟಾ ಲಾರ್ಜ್ ಅಥವಾ ಪಿರಿಯಡ್ ಪ್ಯಾಂಟಿ ಬಳಕೆ ಮಾಡಿ, ಇದರಿಂದ ಹಾಸಿಗೆ ಮೇಲೆ ಕಲೆ ಆಗೋದಿಲ್ಲ.