ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಸಂಸದೆ, ನಟಿ ಸುಮಲತಾ ಅವರು ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರ ಅಂತಿಮ ದರುಶನ ಪಡೆದಿದ್ದಾರೆ.
ನಂತರ ಮಾತನಾಡಿ, ಎಸ್ ಎಂ ಕೃಷ್ಣ ಅವರು ಡಿಗ್ನಿಫೈಡ್ ರಾಜಕಾರಣಿ ಎಂದು ಬಣ್ಣಿಸಿದ್ದಾರೆ.ನಮ್ಮ ಕರ್ನಾಟಕ ಕಂಡಂತಹ ಅತ್ಯಂತ ಶ್ರೇಷ್ಠ ರಾಜಕಾರಣಿ ಆಗಿದ್ದರು. ರಾಜ್ಯದ ರಾಜಕಾರಣದಲ್ಲಿ ಸಭ್ಯತೆ, ಸಂಸ್ಕಾರ ಕಲಿಸಿದವರು. ಮಂಡ್ಯದ ಹೆಮ್ಮೆಯ ಸುಪುತ್ರ ಆಗಿದ್ದರು. ಎಸ್.ಎಂ ಕೃಷ್ಣರವರು ಡಿಗ್ನಿಫೈಡ್ ರಾಜಕಾರಣಿ ಆಗಿದ್ದರು. ಇನ್ನೂ ಎಂದೂ ಇಂತಹ ರಾಜಕೀಯ ವ್ಯಕ್ತಿಯನ್ನು ನೋಡಲು ಆಗೋದಿಲ್ಲ ಎಂದಿದ್ದಾರೆ.