ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಐಶ್ವರ್ಯಾ ರೈ ಒಂದು ಕಾಲದಲ್ಲಿ ಬಾಲಿವುಡ್‌ನ್ನು ಆಳಿದಂಥ ಸೌಂದರ್ಯವತಿ ನಟಿ. ಐಶ್ವರ್ಯಾ ಸೌಂದರ್ಯ ಹಾಗೂ ನಟನೆಗೆ ಮನಸೋಲದವರಿಲ್ಲ. ಮಾಡೆಲಿಂಗ್ ದಿನಗಳಲ್ಲಿ ಐಶ್ವರ್ಯಾಗೆ ಸಿನಿಮಾ ಫೀಲ್ಡ್‌ಗೆ ಬರಬೇಡಿ ಎಂದು ಖ್ಯಾತ ನಟ ಸಂಜಯ್ ದತ್ ಹೇಳಿದ್ದರಂತೆ!
ಮ್ಯಾಗಜೀನ್ ಫೋಟೋಶೂಟ್ ಸಮಯದಲ್ಲಿ ಐಶ್ವರ್ಯಾ ರೈ ಮೊದಲು ಸಂಜಯ್ ದತ್ ಅವರನ್ನು ಭೇಟಿಯಾದರು. ಆ ಸಮಯದಲ್ಲಿ ಅವರು ನಟಿಯಾಗಿರಲಿಲ್ಲ. ಐಶ್ವರ್ಯಾ ರೈ ಸೌಂದರ್ಯ ನೋಡಿದ ಸಂಜಯ್ ದತ್ ಫಿದಾ ಆದರು. ಹಳೆಯ ಸಂದರ್ಶನವೊಂದರಲ್ಲಿ, ಸಂಜಯ್ ದತ್ ಅವರು ಐಶ್ವರ್ಯಾ ಅವರೊಂದಿಗಿನ ಮೊದಲ ಭೇಟಿಯ ಬಗ್ಗೆ ಮಾತನಾಡಿದ್ದರು. ಐಶ್ವರ್ಯಾ ಅವರನ್ನು ನೋಡಿದ ಸಂಜಯ್ ದತ್, ‘ಯಾರು ಈ ಸುಂದರ ಹುಡುಗಿ’ ಎಂದು ಕೇಳಿದ್ದರಂತೆ.
ಆ ವೇಳೆ ಐಶ್ವರ್ಯಾ ರೈಗೆ ಸಂಜಯ್ ದತ್ ಸಲಹೆ ನೀಡಿದ್ದರು. ‘ನೀವು ಮಾಡೆಲಿಂಗ್ ವೃತ್ತಿಯನ್ನು ಮುಂದುವರಿಸಿ. ಚಿತ್ರರಂಗದಿಂದ ದೂರವಿರಿ’ ಎಂದು ಸೂಚಿಸಿದ್ದರು. ವರದಿಗಳ ಪ್ರಕಾರ, ಐಶ್ವರ್ಯಾ ಅವರಲ್ಲಿ ಕಂಡ ಮುಗ್ಧತೆ ಸಂಜಯ್ ದತ್ ಅವರ ಹೃದಯವನ್ನು ಗೆದ್ದಿತ್ತು. ಹೀಗಾಗಿ, ‘ನೀವು ಚಿತ್ರರಂಗದಿಂದ ದೂರ ಇರಿ. ಈ ಕ್ಷೇತ್ರವು ನಿಮ್ಮನ್ನು ಬದಲಾಯಿಸುತ್ತದೆ. ಇಂಡಸ್ಟ್ರಿಯಲ್ಲಿನ ಸವಾಲುಗಳನ್ನು ಎದುರಿಸಿದಾಗ ನಿಮ್ಮ ಚಾರ್ಮ್ ಮತ್ತು ಮ್ಯಾಜಿಕ್ ಕಡಿಮೆಯಾಗುತ್ತದೆ’ ಎಂದು ಸಂಜಯ್ ದತ್ ಹೇಳಿದ್ದರಂತೆ