ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾಯುಪುತ್ರ, ರಾಮಭಕ್ತ ಅಂಜನೇಯನ ಜನ್ಮದಿನದಂದು ಹನುಮಾನ್ ಜಯಂತಿ ಆಚರಿಸಲಾಗುತ್ತದೆ. ದೇಶದ ವಿವಿಧ ಭಾಗಗಳಲ್ಲಿ ಹನುಮನನ್ನು ನಾನಾ ರೀತಿ ಪೂಜಿಸಲಾಗುತ್ತದೆ. ಕರ್ನಾಟಕದಲ್ಲಿಯೂ ಹನುಮಾನ್ ಜಯಂತಿಯನ್ನು ಭಕ್ತಿ, ಶ್ರದ್ಧೆಯಿಂದ ಆಚರಿಸಲಾಗುತ್ತದೆ.
ರಾಮಭಕ್ತ ಹನುಮನ ಜನ್ಮದಿನವನ್ನು ನಾನಾ ರೀತಿಯಲ್ಲಿ ಆಚರಿಸಲಾಗುತ್ತದೆ. ಮನೆಯಲ್ಲಿ ಹನುಮಾನ್ ಚಾಲೀಸಾ ಪಠಿಸುವುದು, ಹನುಮಂತನ ದೇಗುಲಗಳಿಗೆ ಭೇಟಿ ನೀಡುವುದು, ಭಜನೆ, ಉಪವಾಸ ವ್ರತ ಕೈಗೊಳ್ಳುವುದು ಸೇರಿದಂತೆ ನಾನಾ ರೀತಿಯಲ್ಲಿ ಹನುಮಂತನ ಆಶೀರ್ವಾದ ಪಡೆಯಬಹುದು. ಪೂರ್ಣಿಮಾ ತಿಥಿಯ ಶುಕ್ಲ ಪಕ್ಷದ ಚೈತ್ರ ಮಾಸದಂದು ಹನುಮ ಜಯಂತಿಯನ್ನು ಆಚರಿಸಲಾಗುತ್ತದೆ.
ವಾಯುಪುತ್ರ ಹನುಮನ ಪೂಜಿಸಲು ದೇಶದ ವಿವಿಧೆಡೆ ನಾನಾ ಕ್ರಮಗಳನ್ನು ಅನುಸರಿಸುತ್ತಾರೆ. ಹನುಮಾನ್ ಜಯಂತಿಯಂದು ನಾಲ್ಕು ಮುಖಗಳ ದೀಪವನ್ನು ಬೆಳಗಿಸಿ ಹನುಮಾನ್ ಚಾಲೀಸಾ ಪಠಿಸಬಹುದು. ಸುಂದರಕಾಂಡವನ್ನೂ ಓದಬಹುದು. ಹನುಮಂತನಿಗೆ ಪ್ರಿಯವಾದ ಹೂವುಗಳನ್ನು ಬಳಸಿ. ನೈವೇದ್ಯವಾಗಿ ಲಡ್ಡು, ಬಾಳೆಹಣ್ಣು, ಪೇರಳೆ ಮುಂತಾದ ಹಣ್ಣುಗಳನ್ನು ಅರ್ಪಿಸಹುದು. ಹನುಮಂತನಿಗೆ ತುಪ್ಪದ ದೀಪ ಬೆಳಗಿಸಿ.