ಬಿಜೆಪಿ ಸರ್ಕಾರ ಪಂಚಮಸಾಲಿಗಳಿಗೆ ಟೋಪಿ ಹಾಕಿದೆ: ಸಿಎಂ ಸಿದ್ದರಾಮಯ್ಯ ಆರೋಪ

ಹೊಸದಿಗಂತ ವಿಜಯಪುರ:

ಪ್ರಜಾಪ್ರಭುತ್ವ ದಲ್ಲಿ ಹೋರಾಟಕ್ಕೆ ತಕರಾರು ಇಲ್ಲ. ಸಂವಿಧಾನ ಪರವಾಗಿ ಹೋರಾಟ ಇರಬೇಕು. ಬಿಜೆಪಿ ಸರ್ಕಾರ ಪಂಚಮಸಾಲಿಗಳಿಗೆ ಟೋಪಿ ಹಾಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದರು.

ಪಂಚಮಸಾಲಿ ಹೋರಾಟ ವಿಚಾರ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹೈಕೋರ್ಟ ಗೆ ಅಪಡೇಟ್ ಹಾಕಿದ್ಯಾರು ?, ಇದೆ ಸ್ವಾಮೀಜಿಗಳು ಇದ್ದರಲ್ಲ. ಇದೆಲ್ಲ ಮಾಡಿದ್ದು ಬಿಜೆಪಿ ಸರ್ಕಾರದವರು ಎಂದರು.

ರಸೂಲ್ ಎಂಬಾತ ಸುಪ್ರೀಂ ಕೋರ್ಟ‌ಗೆ ಹೋದರು, ಆಗಿನ ಅಡ್ವಿಕೆಟ್ ಜನರಲ್ ಇದರಲ್ಲಿ ಬದಲಾವಣೆ ಮಾಡಲ್ಲ ಎಂದು ಹೇಳಿದ್ದರು. ಟ್ರ್ಯಾಕ್ಟರ್ ತೆಗೆದುಕೊಂಡು ಹೋರಾಟ ಮಾಡುತ್ತೇವೆ ಎಂದ್ರಿ, ಕೋರ್ಟ ಶಾಂತಿಯುತವಾಗಿ ಮಾಡೋಕೆ ಹೇಳಿತು. ಅವರು ಕಾನೂನು ಕೈಗೆ ತೆಗೆದುಕೊಂಡರು, ನಾನು ಮೂರು ಜನ ಮಂತ್ರಿಗಳನ್ನ ಕಳಿಸಿದ್ದೆ, ಅವರು ಇವ್ರನ್ನ ಸಿಎಂ ಗೆ ಮಾತಾಡಿಸ್ತೀವಿ ಎಂದು ಕರೆದರು. ಸಿಎಂ ಅಲ್ಲೆ ಬರಬೇಕು ಅಂದ್ರು, ಸಿಎಂ ಎಲ್ಲ ಕಡೆಗೂ ಹೋಗೊಕೆ ಆಗತ್ತಾ ? ಎಂದರು.

ನಾನು ಮಾತಾಡೋಣ ಬನ್ನಿ ಎಂದ್ರು ಬರಲಿಲ್ಲ. ಸುವರ್ಣ ಸೌಧಕ್ಕೆ ನುಗ್ಗೋಕೆ ಯತ್ನ ಮಾಡಿದ್ರು, ಕಲ್ಲು ತೂರಾಟ ಮಾಡಿದ್ರು, ಪೊಲೀಸರಿಗೆ ಗಾಯ ಆಗಿವೆ, ನಮ್ಮ ಬಳಿ ಪ್ರೂಪ್ ಇವೆ, ಪೋಟೋ ಬೇಕಾದರೂ ತೋರಿಸ್ತೀನಿ ಎಂದ‌ರು.

ಕಾನೂನು ಕೈಗೆ ತೆಗೆದುಕೊಂಡರೆ ಸರ್ಕಾರ ಸುಮ್ಮನಿರಲ್ಲ, ಶಾಂತಿಯುತವಾಗಿ ಹೋರಾಟ ಮಾಡಬೇಕು ಎಂದರು.

ಸಿಎಂ ಲಿಂಗಾಯತ ವಿರೋಧಿ ಸ್ವಾಮೀಜಿ ಆರೋಪ ವಿಚಾರಕ್ಕೆ, ಸ್ವಾಮೀಜಿ ಬಗ್ಗೆ ಮಾತನಾಡಲ್ಲ, ಸ್ವಾಮೀಜಿ ಮಾತನಾಡಿರೋದರ ಬಗ್ಗೆ ಜನ ತೀರ್ಮಾನ ಮಾಡ್ತಾರೆ ಎಂದರು.

ಆಲಮಟ್ಟಿ ಎತ್ತರ ಹೆಚ್ಚಳ ಕುರಿತು, ಎತ್ತರದ ಪರವಾಗಿ ಇದ್ದೇವೆ ಎಂದರು. ಸಚಿವ ಎಚ್.ಕೆ. ಪಾಟೀಲ, ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ ಇತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!