ವಕ್ಪ್ ಚರ್ಚೆಯಲ್ಲಿ ರಾಜೀನಾಮೆ ಸವಾಲು, ಪ್ರತಿ ಸವಾಲು ಹಾಕಿದ ಅಶೋಕ್-ಜಮೀರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಳಗಾವಿ ಅಧಿವೇಶನದಲ್ಲಿ ವಕ್ಫ್ ವಿಚಾರಕ್ಕೆ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ವಿಪಕ್ಷ ನಾಯಕ ಆರ್. ಅಶೋಕ್ ನಡುವೆ ಮಾತಿನ ಚಟಾಪಟಿ ನಡೆದಿದೆ.

ವಕ್ಪ್ ಚರ್ಚೆ ವೇಳೆ ಅಶೋಕ್ ಹಾಗೂ ಜಮೀರ್ ನಡುವೆ ಸವಾಲು, ಪ್ರತಿ ಸವಾಲು ಹಾಕಿದ್ದಾರೆ.

ವಕ್ಪ್ ನೋಟಿಸ್ ಕೊಟ್ಟಿರೋದು ತಪ್ಪಿಲ್ಲ ಅಂದರೆ, ನಾನು ಪ್ರತಿಪಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಗೆ ನಿಲ್ತೀನಿ, ಬೇಕಿದ್ರೆ ಸ್ಪೀಕರ್ ನನಗೆ ಛೀಮಾರಿ ಹಾಕಲಿ ಅಂತ ಅಶೋಕ್ ಹೇಳಿದ್ದು, ಇದಕ್ಕೆ ಸವಾಲು ಸ್ವೀಕರಿಸಿ, 101 ನೋಟಿಸ್ ಕೊಟ್ಟಿದ್ದಾರೆ ಅಂದ್ರಲ್ಲ, ಅದು ಕೊಡಿ, ಈವಾಗ್ಲೇ ನಾನು ನನ್ನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ. ರಾಜಕೀಯದಿಂದ ನಿವೃತ್ತಿ ತಗೊಳ್ತೇನೆ ಅಂತ ಜಮೀರ್ ಪ್ರತಿ ಸವಾಲು ಹಾಕಿದ್ದಾರೆ.

ಈ ವೇಳೆ ಜಮೀರ್ ಬೆಂಬಲಕ್ಕೆ ನಿಂತು, ಶಾಸಕ ಬಸವರಾಜ ರಾಯರೆಡ್ಡಿ ಮಾತಾಡೋಕೆ ಮುಂದಾದರು. ಇಲ್ಲಿ ಎಲ್ಲಾ ಕಾನೂನು ಕಲಿತವರೇ ಇದ್ದಾರೆ, ನೀವು ಸುಮ್ಮನೆ ಕುಳಿತುಕೊಳ್ಳಿ ಎಂದು ಸ್ಪೀಕರ್ ಖಾದರ್ ಗದರಿದರು.

ಮುಸ್ಲಿಮರು ಮತ ಹಾಕಿಲ್ಲ, ಕಾಂಗ್ರೆಸ್‌ಗೆ ಅಷ್ಟೇ ಹಾಕ್ತಾರೆ ಅಂತ ಇಲ್ಲಿ ಮಾತಾಡ್ತಿದ್ದಾರೆ. ಸ್ವಾರ್ಥಕ್ಕಾಗಿ ಮಾತಾಡ್ತಿದ್ದೀರಿ. ದೇಶ ಸುಡಬೇಡಿ, ನೆಮ್ಮದಿಯಾಗಿ ಇರಲು ಬಿಡಿ ಅಂತ ಶಾಸಕ ಶಿವಲಿಂಗೇಗೌಡ ಹೇಳಿದ್ರು. ಇದಕ್ಕೆ ಟಾಂಗ್ ಕೊಟ್ಟ, ಆರಗ ಜ್ಞಾನೇಂದ್ರ, ಕಾಂಗ್ರೆಸ್‌ನಲ್ಲಿ ಮತ ಬ್ಯಾಂಕ್ ಇದೆ ಅಂತಲೇ ಶಿವಲಿಂಗೇಗೌಡ ಜೆಡಿಎಸ್ ಬಿಟ್ಟು ಹೋಗಿದ್ದಾರೆ ಅಂತ ಕಾಲೆಳೆದರು.
ಜಾಹೀರಾತು

ನಂತರ ಜಮೀರ್ ಅಹಮದ್ ದಾಖಲೆ ಕೇಳಿದ್ದಾರೆ, ಕೊಡ್ತೀನಿ ಅಂತ ಅಶೋಕ್ ಚರ್ಚೆ ಮುಂದುವರೆಸಿ, ವಕ್ಪ್ ಗೆ ಸರ್ಕಾರ ಒಂದಿಂಚು ಜಾಗ ಕೊಟ್ಟಿಲ್ಲ, ಅದೆಲ್ಲವೂ ದಾನಿಗಳು ಕೊಟ್ಟಿರೋದು ಅಂತ ಜಮೀರ್ ಸಮರ್ಶಿಸಿದರು. ಈ ವೇಳೆ ಇಬ್ಬರ ನಡುವೆ ವಾಗ್ಯುದ್ಧ ಶುರುವಾಯ್ತು. ಮೂರನೇ ಅತಿದೊಡ್ಡ ಸಂಸ್ಥೆ ವಕ್ಪ್ ಮಂಡಳಿ ಅಂತೆ, ಅದು ಅವರ ವೆಬ್ಸೈಟ್‌ನಲ್ಲೇ ಇದೆ. ದೇಶದಲ್ಲಿ ಸುಮಾರು 9.4 ಲಕ್ಷ ಎಕರೆ ಪ್ರದೇಶ ಹೊಂದಿದೆ. ಸುಮಾರು 8.7 ಲಕ್ಷ ಆಸ್ತಿ ವಕ್ಫ್ ಬೋರ್ಡ್ ಆಸ್ತಿ ಹೊಂದಿದೆ ಅಂತ ಅಶೋಕ್ ಮಾಹಿತಿ ಕೊಟ್ಟರು.

ಸ್ಪಷ್ಟನೆ ಕೊಟ್ಟ ಜಮೀರ್
ರಾಜ್ಯದಲ್ಲಿ 1 ಲಕ್ಷ 28 ಸಾವಿರ ಎಕರೆ ಆಸ್ತಿಯಿದೆ. ವಕ್ಫ್‌ನಲ್ಲಿ ಇರುವ ಆಸ್ತಿ ದಾನ ಕೊಟ್ಟಿರೋದು. ಸರ್ಕಾರದ ಆಸ್ತಿ ಅಲ್ಲ. 2016 ಸರ್ಕಾರದಿಂದ ಆದೇಶ ಮಾಡಿದ್ದರು. ಹಿಂದು, ಮುಸ್ಲಿಂ, ಕ್ರೈಸ್ತರು ಇರ್ತಾರೆ. ಖಬರಸ್ಥಾನಕ್ಕೆ ಕೊಡಬೇಕು, ಸ್ಮಶಾನಕ್ಕೆ ಕೊಡಬೇಕು ಅಂತ ದಾನ ಕೊಟ್ಟ ಜಾಗ ಅಂತ ಜಮೀರ್ ಮಾಹಿತಿ ಕೊಟ್ಟರು.

ರಾಜ್ಯ ವಕ್ಫ್ ಬೋರ್ಡ್‌ನಲ್ಲಿ ಒಟ್ಟು ಆಸ್ತಿ 47 ಸಾವಿರ 470 ಆಸ್ತಿ ಗಳಿವೆ. 1 ಲಕ್ಷ 11 ಸಾವಿರದ 874 ಎಕರೆ 9 ಗುಂಟೆ ಜಮೀರ್ ಆಸ್ತಿಯಿದೆ. ವಿವಾದಿತ ಜಮೀನು 84 ಸಾವಿರ ಎಕರೆಯಿದೆ. ಇದು ವಕ್ಫ್ ತನ್ನದು ಅನ್ನೋ ಜಮೀನಿನ ವಿವರ, ಕಲಬುರಗಿ – 20865 ಎಕರೆ ಕಬಳಿಕೆ ಆಗಿದೆ, ವಿಜಯಪುರ – 13570 ಎಕರೆ ಕಬಳಿಕೆ, ಬೀದರ್- 13310 ಎಕರೆ ಕಬಳಿಕೆ, ಕೊಡಗು – 248 ಎಕರೆ ಕಬಳಿಕೆ ಆಗಿದೆ ಅಂತ ಅಶೋಕ್ ಅಂಕಿ ಅಂಶ ನೀಡಿದರು.

ಟೌನ್‌ಹಾಲ್, ಸಿಟಿ ಮಾರ್ಕೆಟ್, ಅವೆನ್ಯೂ ರೋಡ್ ವಕ್ಫ್‌ನದ್ದು ಅಂತಾರೆ. ಸರ್ವೇ ನಂ 22ರಲ್ಲಿರುವ 122 ಎಕರೆ ಜಮೀನು, ಪಹಣಿ ಚೇಂಜಾಗಿದೆ. ಇದನ್ನು ದಯವಿಟ್ಟು ಬೇಗ ಸರಿ ಮಾಡಿಕೊಡಿ ಅಂತ ಅಶೋಕ್ ಆಗ್ರಹಿಸಿದ್ರು. ಚಾಮರಾಜಪೇಟೆ ಈದ್ಗಾ ಮೈದಾನ ಕೂಡಾ ವಕ್ಫ್ ಬೋರ್ಡ್ ಡಿಕ್ಲೇರ್ ಮಾಡಿದ್ರು. ನಾನು ಕಂದಾಯ ಸಚಿವ ಆಗಿದ್ದಾಗ ಕ್ಯಾನ್ಸಲ್ ಮಾಡಿಸಿದ್ದೆ, ಅಲ್ಲಿ 75 ವರ್ಷ ರಾಷ್ಟ್ರ ಧ್ವಜ ಹಾರಿಸಲು ಬಿಟ್ಟಿರಲಿಲ್ಲ. ಎಲ್ಲ ನಮ್ಮದೇ ಅಂತಿದ್ರೆ ರಾಜ್ಯದ ಜನತೆಗೆ ಏನು ಸಂದೇಶ ಕೊಡ್ತೀರಿ ಅಂತ ಅಶೋಕ್ ಪ್ರಶ್ನಿಸಿದರು.

ವಕ್ಫ್ ಆಸ್ತಿ ಇದ್ರೆ ನೊಟೀಸ್ ಕೊಡ್ತಾರೆ, ವಕ್ಫ್ ಅಲ್ಲದ ಆಸ್ತಿಗಳಿಗೆ ನೊಟೀಸ್ ಕೊಟ್ರೆ ದಾಖಲೆ ಕೊಡಿ ಅಂತ ಜಮೀರ್ ಆಗ್ರಹಿಸಿದ್ರು. ಚಾಮರಾಜಪೇಟೆ ಮೈದಾನ ಇನ್ನೂರು ವರ್ಷಗಳ ಹಿಂದೆ‌ ಕೊಟ್ಟಿದ್ದು, ವಕ್ಫ್ ಬೋರ್ಡ್ ದು ಅಂತ ಇದ್ದಿದ್ದಕ್ಕೇ ನೊಟೀಸ್ ಕೊಟ್ಟಿದ್ದು. ದೇವಸ್ಥಾನಗಳಿಗೆ ನೊಟಿಸ್ ಕೊಡಲ್ಲ, ವಕ್ಫ್ ಆಸ್ತಿಯಲ್ಲಿ ದೇವಸ್ಥಾನ ಕಟ್ಟಿದ್ರೆ ಅದು ದೇವಸ್ಥಾನದ ಜಾಗನೇ. ಬಿಜೆಪಿಯವರ ಹಾಗೆ ಮಸೀದಿಗಳಡಿ ಲಿಂಗ ಇದೆ ಅಂತ ನಾವು ಹುಡುಕ್ಕೊಂಡು ಹೋಗಲ್ಲ ಅಂತ ಜಮೀರ್ ಟಾಂಗ್ ಕೊಟ್ಟರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!