ಸಂಭಲ್‌ ಮಸೀದಿ ಸುತ್ತ ಒತ್ತುವರಿ ತೆರವು: ಪುರಾತನ ಶಿವ, ಹನುಮಂತ ವಿಗ್ರಹಗಳು ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಂಭಲ್‌ನಲ್ಲಿರುವ ಶಾಹಿ ಜಾಮಾ ಮಸೀದಿಯಲ್ಲಿನ ಅತಿಕ್ರಮಣವನ್ನು ತೆರವುಗೊಳಿಸುವಾಗ ಸುಮಾರು 40 ವರ್ಷ ಬಳಿಕ ಓಪನ್ ಆಗಿದ್ದು, 400 ವರ್ಷ ಹಳೆಯ ಎನ್ನಲಾಗುತ್ತಿರುವ ವಿಗ್ರಹಗಳು ಪತ್ತೆಯಾಗಿದೆ.

ಸಂಭಲ್‌ನಲ್ಲಿ ಹಿಂಸಾಚಾರ ನಡೆದಿದ್ದ ಮಸೀದಿ ಸುತ್ತಮುತ್ತ ಸರ್ಕಾರ ಒತ್ತುವರಿ ತೆರವು ಕಾರ್ಯ ಆರಂಭಿಸಿದೆ. ದೇವಾಲಯದಲ್ಲಿ ಶಿವ ಮತ್ತು ಹನುಮಂತನ ವಿಗ್ರಹಗಳು ಪತ್ತೆಯಾಗಿವೆ. ನಖಾಸಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಂಕಿತ ಅಕ್ರಮ ವಿದ್ಯುತ್ ಸಂಪರ್ಕಗಳನ್ನು ಹೊಂದಿರುವ ಸ್ಥಳಗಳನ್ನು ಕೂಡ ಈ ಕಾರ್ಯಾಚರಣೆಯು ಗುರಿಯಾಗಿಸಿದೆ.

ನಗರ ಹಿಂದೂ ಸಭಾದ ಪೋಷಕರಾದ ವಿಷ್ಣು ಶರಣ್ ರಸ್ತೋಗಿ ಅವರು 1978 ರ ನಂತರ ದೇವಾಲಯವನ್ನು ಪುನಃ ತೆರೆಯಲಾಗಿದೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here