ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಪುತ್ರ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ನ ಕಾರ್ಯನಿರ್ವಾಹಕೇತರ ನಿರ್ದೇಶಕ ಅನಂತ್ ಅಂಬಾನಿ ಅವರು ಶನಿವಾರ ಮುಂಬೈನಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದರು.
“ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕೇತರ ನಿರ್ದೇಶಕ ಅನಂತ್ ಎಂ. ಅಂಬಾನಿ ಅವರು ಇಂದು ಮುಂಬೈಗೆ ಗೌರವಾನ್ವಿತ ಭೇಟಿ ನೀಡಿದರು” ಎಂದು ಯುಪಿ ಮುಖ್ಯಮಂತ್ರಿ ಪೋಸ್ಟ್ ಮಾಡಿದ್ದಾರೆ.
ಸಿಎಂ ಯೋಗಿಗೆ ಅನಂತ್ ಅಂಬಾನಿ ಚಿನ್ನದ ಶಾಲು ತೊಡಿಸಿದ್ದಾರೆ. ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ 2025ರ ಮಹಾಕುಂಭ ಮೇಳದ ಲಾಂಛನವನ್ನೂ ಮುಖ್ಯಮಂತ್ರಿಗಳು ಅಂಬಾನಿಗೆ ನೀಡಿದ್ದಾರೆ.
ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭ ಮೇಳ ಉತ್ಸವವು ಜನವರಿ 13 ರಂದು ಪ್ರಾರಂಭವಾಗಿ ಮುಂದಿನ ವರ್ಷ ಫೆಬ್ರವರಿ 26 ರಂದು ಮುಕ್ತಾಯಗೊಳ್ಳಲಿದೆ.