ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೋಶಿಯಲ್ ಮೀಡಿಯಾದಲ್ಲಿ ತುಂಟ ಪ್ರಾಣಿಗಳ ಮುದ್ದು ಕ್ಷಣಗಳು ಯಾವಾಗಲೂ ಜನರ ಗಮನ ಸೆಳೆಯುತ್ತವೆ. ಇತ್ತೀಚೆಗೆ ಪುಟ್ಟ ಬಾಲಕನೊಂದಿಗೆ ಆಟವಾಡುತ್ತಿರುವ ಮರಿಯಾನೆಯೊಂದು ಎಲ್ಲರ ಮನ ಗೆದ್ದಿದೆ. ಈ ವಿಡಿಯೋದಲ್ಲಿ ಮರಿಯಾನೆಯ ಮುದ್ದು ನಟನೆ ನೋಡಿದ ನೆಟ್ಟಿಗರು, “ಇದು ನಿಜವೇ?” ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
ಎಕ್ಸ್ (ಹಳೆಯ ಟ್ವಿಟರ್) ವೇದಿಕೆಯಲ್ಲಿ @Hinduism_sci ಎಂಬ ಖಾತೆಯಿಂದ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, “ಇಂದಿನ ಇಂಟರ್ನೆಟ್‌ನ ಅತ್ಯಂತ ಸುಂದರ ವಿಡಿಯೋ” ಎಂಬ ಶೀರ್ಷಿಕೆ ನೀಡಲಾಗಿದೆ. ದೃಶ್ಯದಲ್ಲಿ ಪುಟ್ಟ ಬಾಲಕ ಕೈಯಲ್ಲಿ ನೀರಿನ ಆಟಿಕೆ ಗನ್ ಹಿಡಿದು ಮರಿಯಾನೆಯೊಂದಿಗೆ ಆಟವಾಡುತ್ತಾನೆ. ತಮಾಷೆಯಾಗಿ ಗನ್ ಅನ್ನು ಆನೆಯತ್ತ ಗುರಿಯಿಡುತ್ತಿದ್ದಂತೆ, ನೀರು ಸಿಂಪಡಿಸಿದ ಕ್ಷಣದಲ್ಲಿ ಮರಿಯಾನೆ ನೆಲಕ್ಕೆ ಬಿದ್ದಂತೆ ನಟಿಸುವುದು ಎಲ್ಲರಿಗೂ ನಗು ತರಿಸಿದೆ.
ಮರಿಯಾನೆ ಎದ್ದು ನಿಲ್ಲದಿರುವುದನ್ನು ನೋಡಿ ಬಾಲಕ ಗಾಬರಿಗೊಳ್ಳುತ್ತಾನೆ. ಕೈಯಲ್ಲಿದ್ದ ಆಟಿಕೆಯನ್ನು ಬಿಟ್ಟು ತಕ್ಷಣ ಆನೆಯತ್ತ ಓಡಿ ಹೋಗಿ ಅಪ್ಪಿಕೊಂಡು ಮುದ್ದಾಡುತ್ತಾನೆ. ಅಷ್ಟರಲ್ಲೇ ಮರಿಯಾನೆ ನಿಧಾನವಾಗಿ ಎದ್ದು ನಿಲ್ಲುತ್ತದೆ. ಈ ದೃಶ್ಯವೇ ವಿಡಿಯೋಗೆ ಹೃದಯಸ್ಪರ್ಶಿ ತಿರುವು ನೀಡಿದೆ.
ಈ ವಿಡಿಯೋ ಈಗಾಗಲೇ ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದ್ದು, “ಮತ್ತೆ ಮತ್ತೆ ನೋಡಬೇಕು”, “ಅತೀ ಮುದ್ದು” ಎಂಬ ಕಾಮೆಂಟ್‌ಗಳು ಹರಿದುಬರುತ್ತಿವೆ. ಕೆಲವರು ಮರಿಯಾನೆಯ ಅಭಿನಯಕ್ಕೆ ಆಸ್ಕರ್ ನೀಡಬೇಕು ಎಂದೂ ಹಾಸ್ಯ ಮಾಡಿದ್ದಾರೆ.


