October 19, 2026
Monday, October 19, 2026
spot_img

ಗ್ರಾಹಕನ ಮೂಗು ಮುರಿದುಹಾಕಿದ ಬ್ಲಿಂಕಿಟ್‌ ಡೆಲಿವರಿ ಏಜೆಂಟ್‌, ಲೊಕೇಷನ್‌ ವಿಷಯಕ್ಕೆ ಜಗಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನಲ್ಲಿ ಲೊಕೇಷನ್‌ ವಿಷಯಕ್ಕೆ ಬ್ಲಿಂಕಿಟ್‌ ಡೆಲಿವರಿ ಏಜೆಂಟ್‌ ಹಾಗೂ ಗ್ರಾಹಕರೊಬ್ಬರ ನಡುವೆ ಜಗಳ ನಡೆದಿದ್ದು, ಬ್ಲಿಂಕಿಟ್‌ ಸಿಬ್ಬಂದಿ ಗ್ರಾಹಕನ ಮೇಲೆ ಹಲ್ಲೆ ಮಾಡಿದ್ದಾನೆ.

ಕೋರಮಂಗಲ ಠಾಣಾ ವ್ಯಾಪ್ತಿಯ ಅಂಗಾಳಮ್ಮ ಲೇಔಟ್‌ನಲ್ಲಿ ಈ ಘಟನೆ ನಡೆದಿದೆ. ಡೆಲಿವರಿ ಏಜೆಂಟ್‌ ಹೊಡೆದ ಹೊಡೆತಕ್ಕೆ ಗ್ರಾಹಕರ ಮೂಗಿನ ಮೂಳೆ ಮುರಿದುಹೋಗಿದೆ.

ಸಂತ್ರಸ್ತ ಪಾಲ್ ಜೆ ವಿಥಯತಿ ಕೋರಮಂಗಲದ 8 ನೇ ಬ್ಲಾಕ್ ನಿವಾಸಿಯಾಗಿದ್ದು, ಕೇರಳ ಮೂಲದವರಾಗಿದ್ದಾರೆ. ಮಾರ್ಚ್ 7 ರಂದು ಬ್ಲಿಂಕಿಟ್‌ನಿಂದ ತಿಂಡಿ ಆರ್ಡರ್ ಮಾಡಿದ್ದಾರೆ. ವಿತರಣಾ ಏಜೆಂಟ್ ಅವರಿಗೆ ಕರೆ ಮಾಡಿ ಮನೆಗೆ ಬರುತ್ತಿರುವುದಾಗಿ ಹೇಳಿದ್ದಾರೆ. ಎರಡನೇ ಮಹಡಿಯ ಫ್ಲಾಟ್‌ಗೆ ಹೋಗುವ ಬದಲು, ವಿತರಣಾ ಏಜೆಂಟ್ ನಾಲ್ಕನೇ ಮಹಡಿಗೆ ಹೋಗಿದ್ದಾರೆ.

ಗ್ರಾಹಕರು ನಾಲ್ಕನೇ ಮಹಡಿ ಅಲ್ಲ ಎರಡನೇ ಮಹಡಿಗೆ ಬನ್ನಿ ಎಂದಿದ್ದಾರೆ. ಸರಿಯಾಗಿ ಅಡ್ರೆಸ್‌ ಹೇಳೋಕಾಗೋದಿಲ್ವಾ ಎಂದು ಬ್ಲಿಂಕಿಟ್‌ ಸಿಬ್ಬಂದಿ ತಮಿಳಿನಲ್ಲಿ ಬೈದಿದ್ದಾನೆ. ಒಬ್ಬರ ಭಾಷೆ ಒಬ್ಬರಿಗೆ ಅರ್ಥವಾಗದೇ ಜಗಳ ವಿಕೋಪಕ್ಕೆ ತಿರುಗಿದೆ. ಆಗ ಡೆಲಿವರಿ ಏಜೆಂಟ್‌ ವಿಜಯಥಿ ಮುಖಕ್ಕೆ ಹೊಡೆದಿದ್ದಾರೆ. ಮೂಗು ಹಾಗೂ ತುಟಿಯಿಂದ ರಕ್ತ ಬಂದಿದೆ.

ಈ ಬಗ್ಗೆ ವಿಜಯಥಿ ಬ್ಲಿಂಕಿಟ್‌ ಟ್ಯಾಗ್‌ ಮಾಡಿ ಟ್ವೀಟ್‌ ಮಾಡಿದ್ದಾರೆ. ಕ್ಷಮಿಸಿ ನಾವು ಅವರ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಬ್ಲಿಂಕಿಂಟ್‌ ಹೇಳಿದೆ. ಸದ್ಯ ಹೊಡೆದು ಓಡಿಹೋದ ವ್ಯಕ್ತಿ ಸಿಕ್ಕಿಲ್ಲ. ಪೊಲೀಸರು ಹುಡುಕಾಟ ನಡೆಸಿದ್ದಾರೆ.

Must Read