ನಮಗೆ ತೆರಿಗೆ ವಿಧಿಸಿದ್ರೆ, ನಾವು ಅವ್ರಿಗೆ ತೆರಿಗೆ ವಿಧಿಸುತ್ತೇವೆ: ಭಾರತಕ್ಕೆ ಟ್ರಂಪ್ ಸಂದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ನಮ್ಮ ಮೇಲೆ ತೆರಿಗೆ ವಿಧಿಸಿದರೆ ನಾವು ಅವರ ಮೇಲೆ ಅಷ್ಟೇ ಪ್ರಮಾಣದ ತೆರಿಗೆ ವಿಧಿಸುತ್ತೇವೆ ಎಂಬ ಸಂದೇಶವನ್ನು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ರವಾನಿಸಿದ್ದಾರೆ.

ಫ್ಲೋರಿಡಾ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು: “ಬಹುತೇಕ ಎಲ್ಲಾ ಸಂದರ್ಭಗಳಲ್ಲಿ, ಅವರು ನಮಗೆ ತೆರಿಗೆ ವಿಧಿಸುತ್ತಾರೆ. ನಾವು ಅವರಿಗೆ ತೆರಿಗೆ ವಿಧಿಸುವುದಿಲ್ಲ. ಆದರೆ ಇನ್ನು ಮುಂದೆ ನಾವು ತೆರಿಗೆಯನ್ನು ಹೆಚ್ಚಿಸುತ್ತೇವೆ ಎಂದು ಹೇಳಿದ್ದಾರೆ.

ಚೀನಾದೊಂದಿಗೆ ಸಂಭವನೀಯ ವ್ಯಾಪಾರ ಒಪ್ಪಂದದ ಕುರಿತು ಪ್ರಶ್ನೆಗೆ ಉತ್ತರಿಸುವಾಗ ಅವರು ಈ ಹೇಳಿಕೆಯನ್ನು ನೀಡಿದರು. ಅಮೆರಿಕದ ಉತ್ಪನ್ನಗಳ ಮೇಲೆ ಹೆಚ್ಚಿನ ಸುಂಕ ವಿಧಿಸುವ ದೇಶಗಳಲ್ಲಿ ಭಾರತ ಮತ್ತು ಬ್ರೆಜಿಲ್ ಸೇರಿವೆ ಎಂದು ಟ್ರಂಪ್ ಹೇಳಿದರು.

ನಮಗೆ ಅಲ್ಲಿಂದ ಮೋಟಾರ್‌ ಸೈಕಲ್‌ ಬರುತ್ತೆ ನಾವು ಮೋಟಾರ್‌ ಸೈಕಲ್‌ ಕಳುಹಿಸುತ್ತೇವೆ. ಅವರು ನಮ್ಮ ಉತ್ಪನ್ನದ ಮೇಲೆ 100% ಮತ್ತು 200% ಶುಲ್ಕ ವಿಧಿಸುತ್ತಾರೆ. ಬ್ರೆಜಿಲ್‌ ಸಹ ಈದೇ ರೀತಿ ತೆರಿಗೆ ಹಾಕುತ್ತದೆ. ಅವರು ನಮಗೆ ಶುಲ್ಕ ವಿಧಿಸಿದರೆ ನಾವು ಅಷ್ಟೇ ಪ್ರಮಾಣದ ಶುಲ್ಕವನ್ನು ವಿಧಿಸುತ್ತೇವೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!