ಮುಂಬೈನ ಎಲಿಫೆಂಟಾ ಗುಹೆಗೆ ತೆರಳುತ್ತಿದ್ದ ದೋಣಿ ಮುಳುಗಡೆ: ಓರ್ವ ಸಾವು, 75 ಜನರ ರಕ್ಷಣೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮುಂಬೈ ಸಮುದ್ರದಲ್ಲಿ ಎರಡು ಬೋಟ್‌ಗಳ ನಡುವೆ ಅಪಘಾತವಾಗಿದ್ದು, ಇದರಲ್ಲಿ ‘ನೀಲಕಮಲ್’ ಎಂಬ ಹೆಸರಿನ ದೋಣಿ ಅಪಘಾತಕ್ಕೀಡಾಗಿದೆ.

ಬುಧವಾರ (ಡಿಸೆಂಬರ್ 18) ಮುಂಬೈನ ಗೇಟ್ ವೇ ಆಫ್ ಇಂಡಿಯಾದಿಂದ ಎಲಿಫೆಂಟಾಗೆ 80 ಜನರನ್ನು ಹೊತ್ತುಕೊಂಡು ಈ ಬೋಟ್‌ ಪ್ರಯಾಣ ಬೆಳೆಸಿತ್ತು. ಈ ವೇಳೆ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಸಣ್ಣ ಬೋಟ್‌ಯೊಂದು ನೀಲಕಮಲ್‌ ಬೋಟ್‌ಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದ ವೇಳೆ ನೀಲಕಮಲ್ ಬೋಟ್‌ ನೀರಿನಲ್ಲಿ ಮುಳುಗಡೆಯಾಗಿದ್ದು, ಇದರಲ್ಲಿ ಸದ್ಯ 75 ಮಂದಿಯನ್ನು ರಕ್ಷಿಸಲಾಗಿದ್ದು, ಓರ್ವ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ. ಇನ್ನುಳಿದವರಿಗಾಗಿ ಪೊಲೀಸರು, ನೌಕಾಪಡೆ, ಕೋಸ್ಟ್‌ಗಾರ್ಡ್‌ಗಳು ಶೋಧ ನಡೆಸುತ್ತಿದ್ದಾರೆ.

ಈ ನೀಲಕಮಲ್‌ ಬೋಟ್ ಮುಂಬೈನ ಗೇಟ್ ವೇ ಆಫ್ ಇಂಡಿಯಾದಿಂದ ಎಲಿಫೆಂಟಾಗೆ ಹೋಗುತ್ತಿದ್ದ ವೇಳೆ ಚಿಕ್ಕ ಬೋಟ್‌ ವ್ಯಕ್ತಿಯೊಬ್ಬ ಅತಿವೇಗದಲ್ಲಿ ತೆಗೆದುಕೊಂಡು ಹೋಗಿ ಈ ಬೋಟ್‌ಗೆ ಡಿಕ್ಕಿ ಹೊಡೆದಿದ್ದಾನೆ . ಈ ಡಿಕ್ಕಿಯ ಪರಿಣಾಮ ದೊಡ್ಡ ಬೋಟ್‌ ಮಗುಚಿ ಬಿದ್ದು, ಈ ದುರಂತ ಸಂಭವಿಸಿದೆ.

ಬೋಟ್‌ ಮಗುಚಿ ಬೀಳುತ್ತಿದ್ದಂತೆ ಅಲ್ಲಿದ್ದ ನೌಕಾಪಡೆ, ಕೋಸ್ಟ್‌ಗಾರ್ಡ್‌ ಸಿಬ್ಬಂದಿ ತಕ್ಷಣ ಬಂದು ಈ ದುರಂತದಿಂದ ಹಲವರನ್ನು ಬಚಾವ್ ಮಾಡಿದ್ದಾರೆ. ಇನ್ನು ಮೀನುಗಾರರ ಹಡಗೊಂಡು ಈ ಬೋಟ್‌‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಮಗುಚಿ ಬಿದ್ದಿದೆ ಎಂದು ವರದಿಯಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!