ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನದಲ್ಲಿ ವಕ್ಫ್ ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರದ ಪರವಾಗಿ ವಿಪಕ್ಷ ನಾಯಕರ ಪ್ರಶ್ನೆಗಳಿಗೆ ಸಿಎಂ ಸಿದ್ದರಾಮಯ್ಯ ಉತ್ತರಿಸಿದ್ದಾರೆ.
ದೇವಸ್ಥಾನಕ್ಕೆ ನೊಟೀಸ್ ಕೊಟ್ಟರೆ ಅದನ್ನು ವಾಪಸ್ಸು ತಗೊಳ್ತೇವೆ ಎಂದಿದ್ದೇವೆ. ದೇವಸ್ಥಾನ ವಕ್ಪ್ ಆಸ್ತಿಯಲ್ಲಿದ್ರು ಆ ಪ್ರಾಪರ್ಟಿಗಳನ್ನು ವಾಪಸ್ಸು ತಗೊಳಲ್ಲ, ಈಗಾಗಲೇ ಚೀಫ್ ಸೆಕ್ರೆಟರಿ ಕೂಡ ಪತ್ರ ಬರೆದಿದ್ದಾರೆ. ಮೈಸೂರಿನ ಮುನೇಶ್ವರನಗರ ಪ್ರಸ್ತಾಪ ಮಾಡಿದ್ದಾರೆ. ಶ್ರೀರಂಗಪಟ್ಟಣ, ಚಿಕ್ಕಬಳ್ಳಾಪುರ ಕೂಡ ಪ್ರಸ್ತಾಪ ಮಾಡಿದ್ದೀರಿ ಅವುಗಳ ಕುರಿತು ಕಂದಾಯ ಸಚಿವ ಕೃಷ್ಣ ಭೈರೇಗೌಡ ಪರಿಶೀಲನೆ ಮಾಡ್ತಾರೆ ಎಂದರು.
ಎಲ್ಲಾ ಕಾಲದಲ್ಲೂ ನೊಟೀಸ್ ಕೊಟ್ಟಿದ್ದಾರೆ. 2014ರಲ್ಲಿ ಬಿಜೆಪಿಯವರು ತಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದಾರೆ, ವಕ್ಪ್ ಆಸ್ತಿ ಕಬಳಿಕೆ ಮಾಡಿದ್ರೆ ವಶಕ್ಕೆ ತಗೊಳ್ಳಬೇಕು ಅಂತಾ, ಒಂದು ವೇಳೆ ರೈತರಿಗೆ ತೊಂದರೆ ಆದರೆ ಒಕ್ಕಲೆಬ್ಬಿಸುವ ಕೆಲಸ ಮಾಡಲ್ಲ. ಯಾವುದು ರೈತರ ಹಾಗೂ ದೇವಸ್ಥಾನದ ಆಸ್ತಿ ಇಲ್ಲ ಅಂದರೆ ಅದರ ಬಗ್ಗೆ ಪರಿಶೀಲಿಸಿ ತೀರ್ಮಾನ ಮಾಡುತ್ತೇವೆ. ವಕ್ಪ್ ಆಸ್ತಿ 1 ಲಕ್ಷದ 10 ಸಾವಿರ ಇತ್ತು, ಆದರೆ ಇವಾಗ ಉಳಿದಕೊಂಡಿರೋದು 20 ಸಾವಿರ ಎಕರೆ. ಬೇರೆ ಬೇರೆ ಕಾರಣಗಳಿಂದ ಹೋಗಿ ಉಳಿದಿರೋದು ಇಷ್ಟೇ. ಇದನ್ನು ರಕ್ಷಣೆ ಮಾಡಬೇಕು ತಾನೇ ಎಂದು ಸಿಎಂ ಹೇಳಿದರು.
ಇನ್ನೂ ಈ ಕುರಿತು ಸರ್ಕಾರದ ಪರವಾಗಿ ಉತ್ತರಿಸಿದ ಸಚಿವ ಜಮೀರ್ ಅಹ್ಮದ್ ಖಾನ್ ಸರ್ಕಾರದ ಒಂದು ಇಂಚು ಜಾಗ ವಕ್ಪ್ ಬೋರ್ಡ್ ತಗೊಂಡಿಲ್ಲ, 17,900 ಎಕರೆ ಬಗ್ಗೆ ವಕ್ಪ್ ಆಸ್ತಿ ಅದಾಲತ್ ಗೆ ಮುಂದಾಗಿದ್ವಿ, ರೈತರದ್ದು ಆಗಲಿ, ದೇವಸ್ಥಾನಗಳದ್ದಾಗಲಿ ಒಂದಿಂಚು ಹೋಗಿಲ್ಲ. ವಕ್ಪ್ ಅದಾಲತ್ ಮಾಡುವಾಗ ಬೆಲ್ಲದ್ ಬಂದಿದ್ರು, ವಿಜಯಪುರದಲ್ಲಿ ಯತ್ನಾಳ್ ಗೆ ಆಹ್ವಾನ ಕೊಟ್ಟಿದ್ದೆ. ಆದರೆ, ಅವ್ರು ಬಂದಿಲ್ಲ, ಮೂರು ದಿನ ಆದಮೆಲೆ ಪ್ರತಿಭಟನೆ ಮಾಡಿದ್ರು ಎಂದು ಹೇಳಿದರು.