Friday, January 23, 2026
Friday, January 23, 2026
spot_img

ಸಿದ್ ಶ್ರೀರಾಮ್ ಕಂಠಸಿರಿಯಲ್ಲಿ ಅರಳಿದ ಪ್ರೇಮಕಾವ್ಯ: ‘ಕರಾವಳಿ’ಯ ಅಲೆಗಳಲ್ಲಿ ತೇಲುತ್ತಿದೆ ‘ಮುದ್ದು ಗುಮ್ಮ’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್‌ವುಡ್‌ನ ‘ಡೈನಾಮಿಕ್ ಪ್ರಿನ್ಸ್’ ಪ್ರಜ್ವಲ್ ದೇವರಾಜ್ ಮತ್ತು ಮಲ್ಟಿ ಟ್ಯಾಲೆಂಟೆಡ್ ರಾಜ್ ಬಿ. ಶೆಟ್ಟಿ ಕಾಂಬಿನೇಷನ್‌ನ ‘ಕರಾವಳಿ’ ಸಿನಿಮಾ ಸದ್ಯ ಸಿನಿವಲಯದಲ್ಲಿ ಸಂಚಲನ ಮೂಡಿಸುತ್ತಿದೆ. ಈಗ ಈ ಚಿತ್ರದ ಮೊದಲ ಹಾಡು ‘ಮುದ್ದು ಗುಮ್ಮ’ ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ.

ಗುರುದತ್ ಗಾಣಿಗ ನಿರ್ದೇಶನದ ಈ ಬಹುನಿರೀಕ್ಷಿತ ಸಿನಿಮಾದಿಂದ ಹೊರಬಂದಿರುವ ಈ ರೊಮ್ಯಾಂಟಿಕ್ ಮೆಲೋಡಿ ಹಾಡು, ಕೇಳುಗರ ಕಿವಿಗೆ ಇಂಪಾದ ಅನುಭವ ನೀಡುತ್ತಿದೆ.

ಸ್ಟಾರ್ ಸಿಂಗರ್ ಸಿದ್ ಶ್ರೀರಾಮ್ ಧ್ವನಿಯಲ್ಲಿ ಈ ಹಾಡು ಮೂಡಿಬಂದಿದ್ದು, ಅವರ ಕಂಠಸಿರಿಗೆ ಗಾನಪ್ರಿಯರು ಫಿದಾ ಆಗಿದ್ದಾರೆ. ಹಾಡಿನಲ್ಲಿ ಪ್ರಜ್ವಲ್ ದೇವರಾಜ್ ಮತ್ತು ಸಂಪದಾ ಜೋಡಿಯ ಕೆಮಿಸ್ಟ್ರಿ ಅದ್ಭುತವಾಗಿ ಮೂಡಿಬಂದಿದೆ.

ಸಚಿನ್ ಬಸ್ರೂರು ಅವರ ಸಂಗೀತ ಸಂಯೋಜನೆ ಹಾಗೂ ಪ್ರಮೋದ್ ಮರವಂತೆ ಅವರ ಸಾಹಿತ್ಯ ಹಾಡಿನ ತೂಕವನ್ನು ಹೆಚ್ಚಿಸಿದೆ.

ಟೀಸರ್ ಮೂಲಕ ಭಾರಿ ಕುತೂಹಲ ಮೂಡಿಸಿದ್ದ ‘ಕರಾವಳಿ’ ತಂಡ, ಈಗ ಹಾಡಿನ ಮೂಲಕ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಸದ್ಯದಲ್ಲೇ ಈ ಸಿನಿಮಾ ಬೆಳ್ಳಿತೆರೆಯ ಮೇಲೆ ಅಪ್ಪಳಿಸಲು ಸಜ್ಜಾಗಿದೆ.

Must Read