ಸಂಸತ್‌ ಆವರಣದಲ್ಲಿ ಪ್ರತಿಭಟನೆ : ಶಸ್ತ್ರಚಿಕಿತ್ಸೆಯಾಗಿದ್ದ ಮೊಣಕಾಲಿಗೆ ಮತ್ತೆ ಗಾಯವಾಗಿದೆ ಎಂದ ಖರ್ಗೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಂಸತ್‌ ಭವನ ಆವರಣದಲ್ಲಿ ಕಾಂಗ್ರೆಸ್‌-ಬಿಜೆಪಿ ಸದಸ್ಯರ ನಡುವಿನ ಪ್ರತಿಭಟನೆ ತಳ್ಳಾಟ-ನೂಕಾಟ ಮಟ್ಟಕ್ಕೆ ತಳ್ಳುಪಿದ್ದು, ಪ್ರತಿಭಟನೆ ವೇಳೆ ಸಂಸತ್‌ನ ಮಕರ ದ್ವಾರದ ಬಳಿ ಬಿಜೆಪಿ ಸಂಸದರು ನನ್ನನ್ನು ದೈಹಿಕವಾಗಿ ತಳ್ಳಿದ್ದಾರೆ. ಇದರಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ತನ್ನ ಮೊಣಕಾಲಿಗೆ ಮತ್ತೆ ಗಾಯವಾಗಿದೆ ಎಂದು ರಾಜ್ಯಸಭೆಯ ಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಈ ಘಟನೆ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಅಂಬೇಡ್ಕರ್‌ ಕುರಿತ ಅಮಿತ್‌ ಶಾ ಅವರ ಹೇಳಿಕೆ ಖಂಡಿಸಿ ಇಂದು I.N.D.I.A ಒಕ್ಕೂಟದ ಸಂಸದರು ದೆಹಲಿಯ ಪ್ರೇರಣಾ ಸ್ಥಳದಲ್ಲಿರುವ ಡಾ. ಅಂಬೇಡ್ಕರ್ ಪ್ರತಿಮೆಯಿಂದ ಮಕರ ದ್ವಾರದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ನಾನು I.N.D.I.A ಒಕ್ಕೂಟದ ಸಂಸದರೊಂದಿಗೆ ಮಕರ ದ್ವಾರ ತಲುಪಿದಾಗ ಬಿಜೆಪಿ ಸಂಸದರು ನನ್ನನ್ನು ದೈಹಿಕವಾಗಿ ತಳ್ಳಿದರು. ಇದರಿಂದ ನಾನು ಸಮತೋಲನ ಕಳೆದುಕೊಂಡು, ಮರಕ ದ್ವಾರದ ಬಳಿಯೇ ನೆಲದ ಮೇಲೆ ಕುಳಿತುಕೊಂಡೆ. ನನ್ನನ್ನು ತಳ್ಳಿದ್ದರಿಂದ ಈಗಾಗಲೇ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ನನ್ನ ಮೊಣಕಾಲುಗಳಿಗೆ ಗಾಯವಾಯಿತು. ಕೂಡಲೇ ಕಾಂಗ್ರೆಸ್‌ ಸಂಸದರು ಕುರ್ಚಿ ತಂದು ನನ್ನು ಕೂರಿಸಿದ್ರು. ಸ್ವಲ್ಪ ಹೊತ್ತು ಕೂತು ಬಹಳ ಕಷ್ಟದಿಂದ ಮತ್ತು ನನ್ನ ಸಹೋದ್ಯೋಗಿಗಳ ಸಹಾಯದಿಂದ 11 ಗಂಟೆಗೆ ಸುಮಾರಿಗೆ ಸದನಕ್ಕೆ ಕುಂಟುತ್ತಾ ಬಂದೆ‌ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಈ ಘಟನೆಯ ಬಗ್ಗೆ ತನಿಖೆಗೆ ಆದೇಶಿಸುವಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ಏಕೆಂದರೆ ಇದು ವೈಯಕ್ತಿಕವಾಗಿ ನನ್ನ ಮೇಲೆ ಮಾತ್ರವಲ್ಲದೇ ರಾಜ್ಯಸಭೆ ವಿಪಕ್ಷ ನಾಯಕ, ಕಾಂಗ್ರೆಸ್ ಅಧ್ಯಕ್ಷರ ಮೇಲಿನ ಹಲ್ಲೆಯಾಗಿದೆ. ಹಾಗಾಗಿ ಘಟನೆ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!