ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿ ಟಿ ರವಿ ಬಿಡುಗಡೆಯಾಗಿದ್ದು, ಇದಾದ ಬೆನ್ನಲ್ಲೆ ಪ್ರತಿಕ್ರಿಯೆ ನೀಡಿದ ಅವರು, ಬಂಧನದ ಬಳಿಕ ಪೊಲೀಸರು ನಡೆಸಿಕೊಂಡ ವರ್ತನೆ ಕುರಿತು ತೀವ್ರ ಬೇಸರ ಹೊರಹಾಕಿದರು.
ಪೊಲೀಸ್ ಠಾಣೆಯ ಪರೀಧಿಗೆ ಬರದಂತಹ ಪ್ರಕರಣವನ್ನು ನನ್ನ ಮೇಲೆ ಹಾಕಿದ್ದರು. ನನ್ನನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗಿಸುವ ಪ್ರಯತ್ನ ನಡೆಯಿತು. ದೈಹಿಕವಾಗಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ರಾತ್ರಿ ಸುಮಾರು 4 ಜಿಲ್ಲೆಗಳನ್ನು ಸತತ 11 ಗಂಟೆಗಳ ಕಾಲ ಸುತ್ತಾಡಿಸಿದ್ದಾರೆ. ಇದರಿಂದ ನಾನು ಕುಗ್ಗುವುದಿಲ್ಲ ಎಂದು ಭಾವುಕರಾದರು.
ಕೋರ್ಟ್ ಆದೇಶಕ್ಕೆ ಪ್ರತಿಕ್ರಿಯೆ ನೀಡಿದ ಅವರು ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಹೇಳಿದರು. ನೀವು ನಿನ್ನೆ ನನಗೆ ಕೊಟ್ಟಿರುವ ಹಿಂಸೆಯನ್ನು 30 ವರ್ಷದ ಹಿಂದೆಯೇ ಅನುಭವಿಸಿದ್ದೇನೆ. ಈ ಪ್ರಕರಣದಿಂದ ನಾನು ಕುಗ್ಗಿಲ್ಲ ಇನ್ನಷ್ಟು ಬಲ ಬಂದಿದೆ. ನಿಮ್ಮ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ನುಡಿದರು.
ಪರಿಷತ್ ಸದಸ್ಯ ಸಿಟಿ ರವಿ ಬಂಧನ ಪ್ರಕರಣಕ್ಕೆ ಮಧ್ಯಂತರ ಟ್ವಿಸ್ಟ್ ಸಿಕ್ಕಿದೆ. ಸಿಟಿ ರವಿಯನ್ನು ರಿಲೀಸ್ ಮಾಡುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಎಲ್ಲಿದ್ದಾರೋ ಅಲ್ಲಿಂದಾನೇ ಅವರನ್ನು ರಿಲೀಸ್ ಮಾಡಿ ಅಂತ ಕೋರ್ಟ್ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಬೆಳಗಾವಿ ಪೊಲೀಸರು ಅವರನ್ನು ದಾವಣಗೆರೆಯಲ್ಲಿ ರಿಲೀಸ್ ಮಾಡಿದ್ದಾರೆ.