ರೂಮರ್ಸ್​ಗಳಿಗೆ ಬ್ರೇಕ್: ಜೊತೆಯಾಗಿ ಕಾಣಿಸಿಕೊಂಡ ಐಶ್ವರ್ಯಾ-ಅಭಿಷೇಕ್ ಬಚ್ಚನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಹಾಗೂ ನಟಿ ಐಶ್ವರ್ಯಾ ರೈ ವಿಚ್ಛೇದನದ ಸುದ್ದಿ ಕಳೆದ ಎರಡು ತಿಂಗಳಿಂದ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಇದೀಗ ಡಿವೋರ್ಸ್ ರೂಮರ್ಸ್​ಗಳಿಗೆ ಐಶ್ವರ್ಯಾ ಹಾಗೂ ಅಭಿಷೇಕ್ ಬಚ್ಚನ್ ಬ್ರೇಕ್​ ಹಾಕಿದ್ದಾರೆ.

ಮಗಳ ಶಾಲಾ ಕಾರ್ಯಕ್ರಮಕ್ಕೆ ಒಟ್ಟಾಗಿ ಬಂದು ಡಿವೋರ್ಸ್ ಪಕ್ಕಾ ಎಂದವರಿಗೆ ಶಾಕ್ ಕೊಟ್ಟಿದ್ದಾರೆ.

ಐಶ್ವರ್ಯಾ ರೈ ಮಗಳ ಶಾಲಾ ಕಾರ್ಯಕ್ರಮವನ್ನು ಎಂದಿಗೂ ಮಿಸ್ ಮಾಡೋದೇ ಇಲ್ಲ. ಮಗಳ ಶೋ ನೋಡಲು ನಟಿ ಐಶ್ವರ್ಯಾ ರೈ, ಅಮಿತಾಬ್​ ಹಾಗೂ ಅಭಿಷೇಕ್ ಜೊತೆ ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್ ನ್ಯಾಷನಲ್ ಸ್ಕೂಲ್​ಗೆ ಬಂದಿದ್ರು. ಈ ವೇಳೆ ನಟಿ ಪತಿಯೊಂದಿಗೆ ನಗು ನುಗುತ್ತಾ ಮಾತಾಡುತ್ತಾ ಕಾರ್ಯಕ್ರಮಕ್ಕೆ ತೆರಳಿದ್ದಾರೆ.

ಐಶ್ವರ್ಯಾ ಮತ್ತು ಅಭಿಷೇಕ್ ಒಟ್ಟಿಗೆ ಇರುವ ವಿಡಿಯೋ ನೋಡಿದ ನೆಟ್ಟಿಗರು ಕೇರಿಂಗ್​ ಹಸ್ಬೆಂಡ್ ಅಂತ ಕಮೆಂಟ್ ಮಾಡ್ತಿದ್ದಾರೆ. ಈಗ ಖುಷಿಯಾಯ್ತು ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ರೆ. ದೇವರು ಈ ದಂಪತಿಯನ್ನ ಖುಷಿಯಾಗಿಡಲಿ ಎಂದು ಮತ್ತೊಬ್ಬರು ಕಮೆಂಟ್ ಮಾಡ್ತಿದ್ದಾರೆ. ಅಭಿಷೇಕ್​ಗೆ ಐಶ್ವರ್ಯಾ ಮೇಲೆ ಎಷ್ಟು ಪ್ರೀತಿ ಅಂತ ಜನರು ಕೊಂಡಾಡ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!