ಕ್ರಿಸ್‌ಮಸ್‌ ಹಬ್ಬದ ಸಂಭ್ರಮ: ನೈಋತ್ಯ ರೈಲ್ವೆಯಿಂದ ವಿಶೇಷ ರೈಲುಗಳ ಸಂಚಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಕ್ರಿಸ್‌ಮಸ್‌ ಹಬ್ಬದ ಸಂಭ್ರಮ ಶುರು ಆಗಿದ್ದು, ಈ ಕ್ಷಣ ಪ್ರಯಾಣಿಕರ ದಟ್ಟಣೆಯನ್ನು ಪೂರೈಸಲು ಬೆಂಗಳೂರಿನ ಸರ್‌ ಎಂ.ವಿಶ್ವೇಶ್ವರಯ್ಯ-ತಿರುವನಂತಪುರಂ ನಾರ್ತ್‌ ನಿಲ್ದಾಣಗಳ ನಡುವೆ ಪ್ರತಿ ದಿಕ್ಕಿನಲ್ಲಿ ಒಂದು ಟ್ರಿಪ್‌ ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.

ಎಸ್ಎಂವಿಟಿ ಬೆಂಗಳೂರು-ತಿರುವನಂತಪುರಂ ನಾರ್ತ್ ಮಧ್ಯ ಒಂದು ಟ್ರಿಪ್ ವಿಶೇಷ ರೈಲು (06507/06508) ಸಂಚಾರ ಮಾಡಲಿದೆ. ಡಿ.23 (ಸೋಮವಾರ) ರಂದು ರಾತ್ರಿ 11:00 ಗಂಟೆಗೆ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿನಿಂದ ಹೊರಟು, ಮರುದಿನ ಸಂಜೆ 4:30 ಕ್ಕೆ ತಿರುವನಂತಪುರಂ ನಾರ್ತ್ ತಲುಪಲಿದೆ.

ಹಿಂತಿರುಗುವಾಗ, ಈ ರೈಲು (06508) ಡಿ.24 (ಮಂಗಳವಾರ) ರಂದು ತಿರುವನಂತಪುರಂ ನಾರ್ತ್ ನಿಲ್ದಾಣದಿಂದ ಸಂಜೆ 5:55 ಕ್ಕೆ ಹೊರಟು, ಮರುದಿನ ಬೆಳಿಗ್ಗೆ 11:15 ಕ್ಕೆ ಸರ್ ಎಂ.ವಿಶ್ವೇಶ್ವರಯ್ಯ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.

ಎರಡೂ ಮಾರ್ಗಗಳಲ್ಲಿ ಈ ರೈಲು ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರ್, ಪೊದನೂರು, ಪಾಲಕ್ಕಾಡ್, ತ್ರಿಶೂರ್, ಅಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ಚಿಂಗವನಂ, ತಿರುವಲ್ಲಾ, ಚೆಂಗನ್ನೂರು, ಮಾವೇಲಿಕರ, ಕಾಯಂಕುಲಂ ಮತ್ತು ಕೊಲ್ಲಂ ನಿಲ್ದಾಣಗಳಲ್ಲಿ ನಿಲ್ಲಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!