ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಕಾಂತಾರ’ ಸಿನಿಮಾದ ಪ್ರೀಕ್ವೆಲ್ ನಿರ್ಮಾಣದಲ್ಲಿ ನಟ ರಿಷಬ್ ಶೆಟ್ಟಿ ಬ್ಯುಸಿಯಾಗಿದ್ದಾರೆ. ತಮ್ಮ ಹುಟ್ಟೂರಾದ ಕೆರಾಡಿಯಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ.
ಇತ್ತ ರಿಷಬ್ ಶೆಟ್ಟಿಯನ್ನು ಹುಡುಕಿಕೊಂಡು ತೆಲುಗು ಚಿತ್ರರಂಗದ ಸ್ಟಾರ್ ನಟರೊಬ್ಬರು, ರಿಷಬ್ ಶೆಟ್ಟಿಯ ಊರಾದ ಕೆರಾಡಿಗೆ ಬಂದಿದ್ದಾರೆ. ಕೆರಾಡಿಗೆ ಬಂದು ಅಲ್ಲಿ ರಿಷಬ್ ಶೆಟ್ಟಿಯ ಜೊತೆ ಓಡಾಡಿ ಅಲ್ಲಿನ ಕತೆಗಳನ್ನು ಕೇಳಿದ್ದಾರೆ.
‘ಬಾಹುಬಲಿ’ ಸಿನಿಮಾದ ಬಲ್ಲಾಳದೇವ ರಾಣಾ ದಗ್ಗುಬಾಟಿ ಅವರು ರಿಷಬ್ ಶೆಟ್ಟಿಯನ್ನು ಹುಡುಕಿ ಬಂದಿದ್ದಾರೆ. ರಿಷಬ್ ಜೊತೆ ಅವರ ಶಾಲೆ, ದೇವಾಲಯಗಳಿಗೆ ಭೇಟಿ ನೀಡಿದ್ದು, ಜೊತೆಗೆ ಸಮುದ್ರದಂಡೆಗೆ ಹೋಗಿ ಕಾಲ ಕಳೆದಿದ್ದಾರೆ.
ರಾಣಾ ದಗ್ಗುಬಾಟಿ ಅಮೆಜಾನ್ ಪ್ರೈಂಗಾಗಿ ಟಾಕ್ ಶೋ ಒಂದನ್ನು ಮಾಡುತ್ತಿದ್ದು, ಹಲವು ಭಾಷೆಗಳ ಸ್ಟಾರ್ ನಟರನ್ನು ಇದಕ್ಕಾಗಿ ಸಂದರ್ಶನ ಮಾಡುತ್ತಿದ್ದಾರೆ. ಇದೀಗ ರಿಷಬ್ ಶೆಟ್ಟಿಯನ್ನು ಕರ್ನಾಟಕಕ್ಕೆ ಬಂದು ಸಂದರ್ಶನ ಮಾಡಿಕೊಂಡು ಹೋಗಿದ್ದಾರೆ.
ರಾಣಾ ದಗ್ಗುಬಾಟಿ ಜೊತೆಗೆ ರಿಷಬ್ ಶೆಟ್ಟಿಯ ಸಂದರ್ಶನಕ್ಕಾಗಿ ನಟಿಯಾದ ನೇಹಾ ಶೆಟ್ಟಿ ಸಹ ಆಗಮಿಸಿದ್ದಾರೆ. ಕೆರಾಡಿ, ಉಡುಪಿ ಇನ್ನಿತರೆ ಕಡೆಗಳಲ್ಲಿ ಇವರು ಸುತ್ತಾಡಿದ್ದಾರೆ. ರಿಷಬ್ ಶೆಟ್ಟಿಯ ಪತ್ನಿಯ ಸಂದರ್ಶನವನ್ನು ಮಾಡಲಾಗಿದೆ.
ರಿಷಬ್ ಶೆಟ್ಟಿ ಹಲವು ತಿಂಗಳುಗಳಿಂದೂ ಕರಾವಳಿ ಭಾಗದಲ್ಲಿ ಸೆಟಲ್ ಆಗಿಬಿಟ್ಟಿದ್ದಾರೆ. ‘ಕಾಂತಾರ’ ಸಿನಿಮಾದ ಪ್ರೀಕ್ವೆಲ್ನ ಚಿತ್ರೀಕರಣ ಬಹುತೇಕ ಕೆರಾಡಿ, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಡೆಯುತ್ತಿದ್ದು, ಇಲ್ಲಿಯೇ ಚಿತ್ರೀಕರಣ ಮಾಡುತ್ತಿದ್ದಾರೆ.
ಇದೀಗ ರಿಷಬ್ ಶೆಟ್ಟಿ ಕನ್ನಡ ಮಾತ್ರವಲ್ಲದೆ ಹಿಂದಿ ಹಾಗೂ ತೆಲುಗು ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ರಿಷಬ್ ಶೆಟ್ಟಿಗೆ ಈಗಾಗಲೇ ಎರಡು ದೊಡ್ಡ ಅವಕಾಶ ಒದಗಿ ಬಂದಿದೆ. ಹಿಂದಿಯಲ್ಲಿ ಸಹ ಶಿವಾಜಿಯ ಪಾತ್ರದಲ್ಲಿ ರಿಷಬ್ ನಟಿಸಲಿದ್ದಾರೆ.