ಹೊಸದಿಗಂತ ಡಿಜಿಟಲ್ ಡೆಸ್ಕ್:
1990ರ ಮಕ್ಕಳ ಹಾಟ್ ಫೇವರೆಟ್ WWE ಸ್ಟಾರ್ ರೇಯ್ ಮಿಸ್ಟೀರಿಯೋ ಫೈಟಿಂಗ್, ಪಲ್ಟಿ ಹೊಡೆಯೋ ಸ್ಟೈಲ್ ನೋಡುವುದೇ ರೋಮಾಂಚನಕಾರಿ ಆಗಿತ್ತು. ತನ್ನದೇ ವಿಭಿನ್ನ ಶೈಲಿಯಲ್ಲಿ ಎಂಟ್ರಿ ಕೊಡುತ್ತಿದ್ದ ರೇಯ್ ಮಿಸ್ಟೀರಿಯೋ ಅಬ್ಬರ ಆನಂದವಾಗಿತ್ತು.
ಇದೀಗ 66 ವರ್ಷದ ರೇಯ್ ಮಿಸ್ಟೀರಿಯೋ ವಿಧಿವಶರಾಗಿದ್ದಾರೆ.
WWE ಸ್ಟಾರ್‌ಗಳ ಸಾವಿನ ಸುದ್ದಿ ಬಗ್ಗೆ ಆಗಾಗ ಸುಳ್ಳು ಸುದ್ದಿ ಕೇಳಿ ಬರುತ್ತಲೇ ಇರುತ್ತದೆ. ಆದರೆ ಈ ಬಾರಿ ರೇಯ್ ಮಿಸ್ಟೀರಿಯೋ ಅಭಿಮಾನಿಗಳು ಇದು ಕೂಡ ಸುಳ್ಳಾಗಲಿ ಎಂದು ಬಯಸಿದ್ದರು. ಆದರೆ ಈ ಬಾರಿ ರೇಯ್ ಮಿಸ್ಟೀರಿಯೋ ಕುಟುಂಬಸ್ಥರು ಈ ಶಾಕಿಂಗ್ ಸುದ್ದಿಯನ್ನು ಖಚಿತ ಪಡಿಸಿದ್ದಾರೆ.
ರೇಯ್ ಮಿಸ್ಟೀರಿಯೋ ಮೆಕ್ಸಿಕನ್ ಮೂಲದ ಕುಸ್ತಿಪಟು. ಎತ್ತರ 5.6 ಅಡಿ. ತೂಕ 79 ಕೆ.ಜಿ. 1976ರಲ್ಲಿ ಮೆಕ್ಸಿಕನ್ ಕುಸ್ತಿಪಟುವಾಗಿ ವೃತ್ತಿ ಜೀವನ ಆರಂಭ.
ಸಾಮಾನ್ಯವಾಗಿ WWEನಲ್ಲಿ ದಢೂತಿ ದೇಹ. 6 ಅಡಿಗಿಂತ ಎತ್ತರದ ಕುಸ್ತಿಪಟುಗಳು ಅಖಾಡಕ್ಕೆ ಇಳಿಯುತ್ತಾರೆ. ಆದರೆ ರೇಯ್ ಮಿಸ್ಟೀರಿಯೋ WWE ಸೂಪರ್ ಸ್ಟಾರ್‌ಗಳ ಮಧ್ಯೆ ಕುಳ್ಳನಂತೆ ಕಾಣುತ್ತಿದ್ದರು. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅನ್ನೋ ಹಾಗೇ ರೇಯ್ ಮಿಸ್ಟೀರಿಯೋ ಅನ್ನ ಸೋಲಿಸೋದು ಅಷ್ಟು ಸುಲಭವಲ್ಲ.
ರೇಯ್ ಮಿಸ್ಟೀರಿಯೋ ಆಡಿದ ಒಂದೊಂದು ಮ್ಯಾಚ್‌ಗಳು ರೋಚಕ ಫಲಿತಾಂಶಗಳನ್ನೇ ಕೊಡುತ್ತಿದ್ದವು. ರೇಯ್ ಮಿಸ್ಟೀರಿಯೋ ಫೈಟಿಂಗ್ ಸ್ಟೈಲ್ ಹಾಗೂ ರೋಚಕ ಟ್ವಿಸ್ಟ್‌ಗಳು ನೋಡುಗರನ್ನ ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತಿದ್ದವು.
ರೇಯ್ ಮಿಸ್ಟೀರಿಯೋ ಮನೆಯಲ್ಲಿ ಇತ್ತೀಚೆಗೆ ಒಂದು ಘೋರ ದುರಂತ ಸಂಭವಿಸಿತ್ತು. ಕಳೆದ ನವೆಂಬರ್ 17ರಂದು ರೇಯ್ ತಂದೆ ರೋಬೇರ್ತ್ವ್ ಗುಟೈರ್ರ್ಜ್ ಅವರು ನಿಧನರಾಗಿದ್ದರು. ಈ ದುಃಖದಲ್ಲಿ ಇಡೀ ಫ್ಯಾಮಿಲಿ ಮುಳುಗಿರುವಾಗಲೇ ರೇಯ್ ಮಿಸ್ಟೀರಿಯೋ ಅವರು ಇಹಲೋಕವನ್ನ ತ್ಯಜಿಸಿದ್ದಾರೆ ಅನ್ನೋ ಸುದ್ದಿ ವೈರಲ್ ಆಗಿದೆ.