ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಸಿನಿಮಾ ಬಿಡುಗಡೆ ಸಮಯ ಹೈದರಾಬಾದ್ ನ ಸಂಧ್ಯಾ ಥಿಯೇಟರ್ ನಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ವಿರುದ್ಧ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲು ಅರ್ಜುನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಐಎಂ ಸದಸ್ಯ ಅಕ್ಬರುದ್ದೀನ್ ಒವೈಸಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ರೇವಂತ್ ರೆಡ್ಡಿ, ಅವನಿಗೆ ಮನುಷ್ಯತ್ವ ಏನಾದ್ರೂ ಇದ್ಯಾ? ಎಂದು ಪ್ರಶ್ನಿಸಿದ್ದಾರೆ.
‘ಸಂಧ್ಯಾ ಥಿಯೇಟರ್ ಕಾಲ್ತುಳಿತ ಘಟನೆಗೆ ಅಲ್ಲು ಅರ್ಜುನ್ ಕಾರಣ ಎಂದು ಆರೋಪಿಸಿರುವ ಸಿಎಂ ರೇವಂತ್ ರೆಡ್ಡಿ, ‘ನಾಯಕ, ನಾಯಕಿಯರಿಗೆ ಥಿಯೇಟರ್ ಗೆ ಬರಬೇಡಿ ಎಂದು ಹೇಳಿದ್ದರೂ ಲೆಕ್ಕಿಸದೆ ಬಂದಿದ್ದಾರೆ. ಸಿನಿಮಾ ಥಿಯೇಟರ್ ಗೆ ಬರುವಾಗ ಕಾರಿನ ಸನ್ ರೂಫ್ ತೆಗೆದು ಅಲ್ಲಿ ರೋಡ್ ಶೋ ಮಾಡಿಕೊಂಡು ಬಂದಿದ್ದಾರೆ. ಇದರಿಂದ ಆ ಥಿಯೇಟರ್ ನ ಪ್ರೇಕ್ಷಕರು ಮಾತ್ರವಲ್ಲ. ಅದೇ ರಸ್ತೆಯಲ್ಲಿದ್ದ ಇತರೆ ಥಿಯೇಟರ್ ಗಳಲ್ಲಿದ್ದ ಪ್ರೇಕ್ಷಕರೂ ಕೂಡ ಸಂಧ್ಯಾ ಥಿಯೇಟರ್ ಗೆ ದೌಡಾಯಿಸಿದಾಗ ಕಾಲ್ತುಳಿತ ಸಂಭವಿಸಿದೆ ಎಂದು ಹೇಳಿದ್ದಾರೆ.
ಥಿಯೇಟರ್ ಬಳಿ ನೂಕುನುಗ್ಗಲು ಉಂಟಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬ ಬಾಲಕನ ಸ್ಥಿತಿ ಚಿಂತಾಜನಕವಾಗಿದೆ. ಇಷ್ಟಾದರೂ ಹೀರೋ ಅಲ್ಲು ಅರ್ಜುನ್.ಥಿಯೇಟರ್ ನಲ್ಲಿ ಏನೂ ಆಗಿಲ್ಲವೇನೋ ಎಂಬಂತೆ ಸಿನಿಮಾ ನೋಡುತ್ತಾ ಕುಳಿತಿದ್ದಾರೆ. ಇಷ್ಟು ಬೇಜವಾಬ್ದಾರಿಯಿಂದ ಥಿಯೇಟರ್ ನಲ್ಲಿ ಕುಳಿತು ಸಿನಿಮಾ ನೋಡಿದ್ರೆ ಹೇಗೆ? ಕಾಲ್ತುಳಿತದಿಂದ ಒಬ್ಬರು ಸಾವನ್ನಪ್ಪಿದ್ದಾರೆ.ಥಿಯೇಟರ್ ನಲ್ಲಿದ್ದ ಅಲ್ಲು ಅರ್ಜುನ್ ಗೆ ಜನದಟ್ಟಣೆ ಬಗ್ಗೆ ಹೇಳಿದರೂ ಕೇಳಲಿಲ್ಲ.. ಏನೂ ಆಗಿಲ್ಲ ಎಂಬಂತೆ ಸಿನಿಮಾ ನೋಡುತ್ತಿದ್ದರು. ಕೂಡಲೇ ಥಿಯೇಟರ್ ತೊರೆಯುವಂತೆ ಹಲವು ಬಾರಿ ಮನವಿ ಮಾಡಿದರೂ ಪೊಲೀಸರ ಮಾತನ್ನೇ ನಿರ್ಲಕ್ಷಿಸಿದ್ದರು. ಆ ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಗದರಿಸಿ ನೀವು ಕೂಡಲೇ ಹೊರಗೆ ಬರದಿದ್ದರೆ ನಿಮ್ಮನ್ನು ಬಂಧಿಸಬೇಕಾಗುತ್ತದೆ ಎಂದು ಗಟ್ಟಿಯಾಗಿ ಹೇಳಿದಾಗ. ನಂತರ ಥಿಯೇಟರ್ ಬಿಟ್ಟು ಹೋದರು ಎಂದು ರೇವಂತ್ ರೆಡ್ಡಿ ಸದನಕ್ಕೆ ತಿಳಿಸಿದ್ದಾರೆ.
ಎಸಿಪಿ ಕೇಳದಿದ್ದರೆ ಡಿಸಿಪಿ ಬಂದು ಸಿನಿಮಾ ಮಧ್ಯೆ ಬಲವಂತವಾಗಿ ಹೊರಗೆ ಕಳುಹಿಸಿದ್ದಾರೆ. ಆ ಸಮಯದಲ್ಲೂ ಅವರು ಥಿಯೇಟರ್‌ನಿಂದ ಹೊರಬಂದು ಅಲ್ಲು ಅರ್ಜುನ್ ಮತ್ತೆ ಕೈ ಬೀಸಿ ರೋಡ್ ಶೋ ಮಾಡಿದ್ದಾರೆ.ಎಸಿಪಿ ಮಟ್ಟದ ಅಧಿಕಾರಿಯ ಮಾತಿಗೆ ಕಿವಿಗೊಡದಿರುವುದು ಅಲ್ಲು ಅರ್ಜುನ್ ಅವರ ಸಮಾಜದ ಜವಾಬ್ದಾರಿ ಎಂದು ಅರ್ಥವಾಗುತ್ತದೆ. ಕಾಲ್ತುಳಿತದಲ್ಲಿ ಒಬ್ಬ ವ್ಯಕ್ತಿ ಸತ್ತಿದ್ದಾನೆ ಎಂದರೂ ಅವನು ಮಾತು ಕೇಳದೆ ಚಲನಚಿತ್ರವನ್ನು ನೋಡುತ್ತಾನೆ. ಸಿನಿಮಾದ ಹೀರೋಗಳು ಜನರ ಪ್ರಾಣಕ್ಕೆ ಜವಾಬ್ದಾರರಲ್ಲವೇ.. ಅಲ್ಲು ಅರ್ಜುನ್ ಆಗಮನದಿಂದಲೇ ಇದೆಲ್ಲ ನಡೆದಿದೆ ಎಂದು ಸಿಎಂ ರೇವಂತ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.