ಮೇಷ
ಕಳೆದು ಹೋದುದಕ್ಕೆ ಚಿಂತಿಸದಿರಿ. ಕೊರಗದಿರಿ.ಕೌಟುಂಬಿಕ ಬದ್ಧತೆ ಪೂರೈಸಬೇಕಾದ ಒತ್ತಡ. ಮಾತು ಹದ ತಪ್ಪದಂತೆ ನೋಡಿಕೊಳ್ಳಿ.
ವೃಷಭ
ಕೆಲಸದ ಒತ್ತಡ ನಿಮ್ಮ ದಿನ ಹಾಳು ಮಾಡ ಬಹುದು. ಬಯಸಿದ ಕಾರ್ಯ ನೆರವೇರದೆ ಅತೃಪ್ತಿ. ಆತ್ಮೀಯರ ಒಡನಾಟ ತಪ್ಪಬಹುದು.
ಮಿಥುನ
ಯಶಸ್ಸು ಮತ್ತು ಅದೃಷ್ಟ ನಿಮ್ಮನ್ನು ಅರಸಿ ಬರಲಿದೆ. ಸಣ್ಣಪುಟ್ಟ ಕಿರಿಕಿರಿ ಬಾಧಿಸಿದರೂ ಅದನ್ನು ನಿಭಾಯಿಸುವಿರಿ. ಹಳೆ ಸ್ನೇಹಿತರ ಭೇಟಿ.
ಕಟಕ
ನಿಮ್ಮ ಚಿಂತನೆ, ಭಾವನೆಗಳಿಗೆ ಮನ್ನಣೆ ದೊರಕುವುದು. ಹಾಗಾಗಿ ನಿಮ್ಮ ಅಭಿಪ್ರಾಯ ವ್ಯಕ್ತ ಮಾಡಲು ಹಿಂಜರಿಕೆ ತೋರದಿರಿ.
ಸಿಂಹ
ವೃತ್ತಿಪರವಾಗಿ ತೃಪ್ತಿಕರ ಬೆಳವಣಿಗೆ. ಕೆಲವು ಕಿರಿಕಿರಿ ಉಂಟಾ ದರೂ ಅದು ಸುಲಭದಲ್ಲೆ ಪರಿಹಾರ. ಬಿಕ್ಕಟ್ಟು ನಿವಾರಣೆಯಾದೀತು.
ಕನ್ಯಾ
ನಿಮ್ಮ ಗುರಿ ಇಂದು ಸಾಧಿಸಲ್ಪಡಲಿದೆ. ನಿಮ್ಮ ಯಶಸ್ಸನ್ನು ಎಲ್ಲರೂ ಮೆಚ್ಚುವರು. ಕೌಟುಂಬಿಕ ಭಿನ್ನಮತ ಸೌಹಾರ್ದದಿಂದ ಪರಿಹರಿಸಿಕೊಳ್ಳಿ.
ತುಲಾ
ನಿಮ್ಮನ್ನು ಕಡೆಗಣಿಸುವ ವ್ಯಕ್ತಿಯ ಕುರಿತಂತೆ ಅತಿಯಾದ ಭಾವುಕತೆ ಬೇಡ.ಯೋಚಿಸಿ , ಬದುಕಲ್ಲಿ ಮುಂದೆ ಸಾಗಲು ಯತ್ನಿಸಿರಿ.
ವೃಶ್ಚಿಕ
ನಿಮ್ಮ ಪಾಲಿಗೆ ತೃಪ್ತಿಕರ ದಿನ. ಕೆಲದಿನಗಳ ಅಸಮಾಧಾನ ನಿವಾರಣೆ. ಬಂಧುಗಳಿಂದ ಉತ್ತಮ ಸಹಕಾರ. ಆರ್ಥಿಕ ಉನ್ನತಿ. ಧನಲಾಭ.
ಧನು
ಉಪಯೋಗಕ್ಕೆ ಬಾರದ ಕೆಲಸದಲ್ಲಿ ತೊಡಗದಿರಿ. ಕೆಲವರಿಂದ ನೋವು ಉಂಟಾದೀತು. ಅದನ್ನು ತೀವ್ರವಾಗಿ ಮನಸ್ಸಿಗೆ ಹಚ್ಚಿಕೊಳ್ಳದಿರಿ.
ಮಕರ
ಇಂದು ಯಾವುದೋ ಕೆಲಸ ಸಾಧಿಸಲು ಹೊರಡುವಿರಿ. ಆದರೆ ಆರಂಭದಿಂದಲೇ ವಿಘ್ನ. ಕೆಲವರ ಅಸಹಕಾರ ಎದುರಿಸುವಿರಿ.
ಕುಂಭ
ಆರಾಮವಾಗಿ ಇರಲು ಅವಕಾಶವಿಲ್ಲ. ಏನಾದರೊಂದು ಕಿರಿಕಿರಿ ಬಾಧಿಸಬಹುದು. ಗುರಿ ಸಾಧಿಸಲು ಧೈರ್ಯದ ಕೊರತೆ. ದೃಢವಾಗಿರಿ.
ಮೀನ
ಮಾನಸಿಕ ಒತ್ತಡ. ಕೆಲಸದಲ್ಲಿ ಏಕಾಗ್ರತೆ ಕಡಿಮೆಯಾದೀತು. ಆಪ್ತರ ಜತೆ ಭಿನ್ನಮತ ಸಂಭವ. ಮಾತು- ಕೃತಿಯಲ್ಲಿ ಸಹನೆಯಿರಲಿ.