ಅಲ್ಲು ಅರ್ಜುನ್‌ ಟೈಮೇ ಸರಿ ಇಲ್ಲ: ನಟನ ವಿರುದ್ಧ ಮತ್ತೊಂದು ದೂರು ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟ ಅಲ್ಲು ಅರ್ಜುನ್‌ ಟೈಮ್‌ ಸರಿಯಿಲ್ಲ ಎನ್ನುವಂತೆ ಕಾಣುತ್ತಿದೆ. ಸಿನಿಮಾ ಕೋಟಿ ಕೋಟಿ ಕಮಾಯಿ ಮಾಡಿದರೂ ಅಲ್ಲುಗೆ ನೆಮ್ಮದಿ ಇಲ್ಲದಂತೆ ಆಗಿದೆ. ಇದೀಗ ಅಲ್ಲು ಅರ್ಜುನ್‌ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.

‘ಪುಷ್ಪ 2’ ಚಿತ್ರ ಇರುವುದು ರಕ್ತಚಂದನ ಕಳ್ಳಸಾಗಣೆ ಮಾಡುವ ಪುಷ್ಪರಾಜ್ ಹಾಗೂ ಪೊಲೀಸ್ ಅಧಿಕಾರಿ ಬನ್ವರ್ ಸಿಂಗ್ ಶೇಖಾವತ್ ನಡುವಿನ ಘರ್ಷಣೆ ಬಗ್ಗೆ. ಇಬ್ಬರೂ ಸದಾ ಕಿತ್ತಾಡಿಕೊಳ್ಳುತ್ತಾರೆ. ಈ ಸಿನಿಮಾದಲ್ಲಿ ಪೊಲೀಸರಿಗೆ ಅವಮಾನ ಆಗಿದೆ ಎಂದು ಕಾಂಗ್ರೆಸ್ ನಾಯಕ ಧೀನ್ಮರ್ ಮಲ್ಲಣ್ಣ ಅವರು ಕೇಸ್ ದಾಖಲು ಮಾಡಿದ್ದಾರೆ. ಸಿನಿಮಾ ಬಗ್ಗೆ ಅವರು ಅಪಸ್ವರ ತೆಗೆದಿದ್ದಾರೆ.

ಬನ್ವರ್ ಸಿಂಗ್ ಶೇಖಾವತ್ ಸ್ವಿಮ್ಮಿಂಗ್​ಪೂಲ್​ನಲ್ಲಿ ಇರುವಾಗ ಪುಷ್ಪರಾಜ್ ಮೂತ್ರ ಮಾಡುತ್ತಾನೆ. ಇದು ಪೊಲೀಸರಿಗೆ ಅವಮಾನ ಮಾಡುವಂಥದ್ದು ಎಂದು ಕಾಂಗ್ರೆಸ್ ನಾಯಕ ಅಭಿಪ್ರಾಯಪಟ್ಟಿದ್ದಾರೆ. ಕಾನೂನನ್ನು ಕಾಪಾಡುವರಿಗೆ ನೀಡುವ ಗೌರವ ಇದಲ್ಲ ಎಂದಿದ್ದಾರೆ. ಹೀಗಾಗಿ, ಅವರು ದೂರು ದಾಖಲು ಮಾಡಿದ್ದು, ಅಲ್ಲು ಅರ್ಜುನ್​ಗೆ ನೋಟಿಸ್ ಹೋಗಿದೆ ಎನ್ನಲಾಗಿದೆ.

ಪುಷ್ಪ 2’ ಚಿತ್ರದ ಪ್ರೀಮಿಯರ್​ ಶೋ ಹೈದರಾಬಾದ್​ನ ಸಂಧ್ಯಾ ಥಿಯೇಟರ್​ನಲ್ಲಿ ನಡೆಯಿತು. ಈ ವೇಳೆ ಅಲ್ಲು ಅರ್ಜುನ್ ಅವರು ಸಿನಿಮಾ ವೀಕ್ಷಣೆಗೆ ಬಂದಿದ್ದರು. ಅವರ ಬಳಿ ಪೊಲೀಸರು ತೆರಳುವಂತೆ ಕೋರಿದ್ದರೂ ಅವರು ಹೋಗಿಲ್ಲ ಎನ್ನಲಾಗಿದೆ. ಈ ಕಾರಣದಿಂದಲೇ ಅಲ್ಲು ಅರ್ಜುನ್ ವಿರುದ್ಧ ಕೇಸ್ ಫೈಲ್ ಆಗಿ ಅವರನ್ನು ಬಂಧಿಸುವ ಕಾರ್ಯ ನಡೆದಿದೆ. ಡಿಸೆಂಬರ್ 13ರಂದು ಅಲ್ಲು ಅರ್ಜುನ್ ಬಂಧನಕ್ಕೆ ಒಳಗಾದರು. ಅವರಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಆದರೆ, 50 ಸಾವಿರ ರೂಪಾಯಿ ಬಾಂಡ್ ಜೊತೆ ಅವರಿಗೆ ಮಧ್ಯಂತರ ಜಾಮೀನು ನೀಡಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here