ಹೊಸದಿಗಂತ ವರದಿ, ವಿಜಯಪುರ:
ಸಿ.ಟಿ. ರವಿ ಹತ್ಯೆಗೆ ದೊಡ್ಡ ಸಂಚು ನಡೆದಿತ್ತು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಸಿ.ಟಿ. ರವಿ ಅಶ್ಲೀಲ ಪದ ಬಳಕೆ ವಿಚಾರ ಬಗ್ಗೆ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಸಿಐಡಿ ಮೇಲೆ ನಮಗೆ ನಂಬಿಕೆ ಇಲ್ಲ. ಸಿಐಡಿಗೆ ಕೊಡುವ ಅವಶ್ಯಕತೆ ಇರಲಿಲ್ಲ ಎಂದರು.
ವಿಧಾನ ಪರಿಷತ್ ಸಭಾಪತಿಯೇ ಹೇಳಿದ್ದಾರೆ, ಯಾವುದೇ ದಾಖಲೆ ಇಲ್ಲ ಎಂದಿದ್ದಾರೆ. ಸಿ.ಟಿ. ರವಿ ಬಂಧನದ ವೇಳೆ ಬೆಳಗಾವಿ ಕಮಿಷನರ್ ಮೂರು ಗಂಟೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು. ಯಾರ ಜೊತೆಗೆ ಮಾತನಾಡುತ್ತಿದ್ದರೂ ಎಂದು ಕಾಲ್ ರೆಕಾರ್ಡ್ ತೆಗೆಯಬೇಕು ಎಂದರು.
ಡಿ.ಕೆ. ಶಿವಕುಮಾರ ಅಥವಾ ಹಿರಿಯ ಅಧಿಕಾರಿಗಳ ಜೊತೆಗೆ ಮಾತನಾಡುತ್ತಿದ್ದರು ಎನ್ನುವುದು ಗೊತ್ತು ಆಗಬೇಕು. ಸಿ.ಟಿ. ರವಿನ್ನು ಕೊಲೆ ಮಾಡುವ ಸಂಚು ನಡೆದಿತ್ತು ಎಂದರು.
ವಿಧಾನ ಸಭೆಯಲ್ಲಿ ಗೂಂಡಾಗಳು ದಾಂಧಲೆ ಮಾಡುತ್ತಾರೆ, ವಿಧಾನ ಸಭೆಯಲ್ಲೂ ಶಾಸಕರಿಗೆ ರಕ್ಷಣೆ ಇಲ್ಲ, ಹೋರಾಟ ಮಾಡುವವರ ಮೇಲೆ ಲಾಠಿಚಾರ್ಜ್ ಮಾಡುತ್ತಾರೆ. ಇದೊಂದು ಜಂಗಲ್ ರಾಜ್ ಆಗಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ಕುರಿತು ಪ್ರತಿಕ್ರಿಯಿಸಿ, ಅದು ಮೂಲ ಕಾಂಗ್ರೆಸ್ ಅಧಿವೇಶನ ಅಲ್ಲ. ಇದು ಇವತ್ತಿನ ನಕಲಿ ಗಾಂಧಿಗಳ ಅಧಿವೇಶನ. ದೇಶದಲ್ಲಿ ಇರೋದು ನಕಲಿ ಗಾಂಧಿಗಳು. ಅದಕ್ಕೆ ಯಾವುದೇ ಪಾವಿತ್ರ್ಯತೆ ಇಲ್ಲ ಎಂದರು.
ಇನ್ನೂ ಬೆಳಗಾವಿಯ ಚಿಕ್ಕೋಡಿಗೆ ಡಾ. ಬಿ. ಆರ್. ಅಂಬೇಡ್ಕರ್ ಅವರು ಬಂದು ಹೋಗಿದ್ದಾರೆ. ಅವರ ಸ್ಮರಣೆಯೂ ಮಾಡಬೇಕಾಗಿತ್ತು ಎಂದರು.