ನಿಂಬೆಹಣ್ಣು ಆರೋಗ್ಯಕ್ಕೆ ಎಷ್ಟು ಮುಖ್ಯವೋ ರುಚಿಗೂ ಅಷ್ಟೇ ಮುಖ್ಯ. ನಿಂಬೆ ಕೂಡ ತ್ವಚೆಗೆ ಉತ್ತಮ ಮನೆಮದ್ದು. ನಮ್ಮ ದೈನಂದಿನ ಆಹಾರದಲ್ಲಿ ನಿಂಬೆ ಕೂಡ ಒಂದು ಪ್ರಮುಖ ಅಂಶವಾಗಿದೆ.
ನಿಂಬೆಯು ಹುಳಿ ರುಚಿಯನ್ನು ಹೊಂದಿರುತ್ತದೆ. ಇದು ಔಷಧೀಯ ಗುಣಗಳನ್ನು ಹೊಂದಿದೆ. ಬಾಳೆಹಣ್ಣು ಮತ್ತು ಮಾವಿನ ನಂತರ, ನಿಂಬೆ ಅತ್ಯಂತ ಜನಪ್ರಿಯ ಹಣ್ಣಿನ ಉತ್ಪನ್ನವಾಗಿದೆ. ತೋಟಗಾರಿಕಾ ಉತ್ಪನ್ನವಾಗಿ, ಇದು ಕಡಿಮೆ ಫಲವತ್ತತೆ ಹೊಂದಿರುವ ಮಣ್ಣಿನಲ್ಲಿಯೂ ಚೆನ್ನಾಗಿ ಬೆಳೆಯುತ್ತದೆ. ವಿಟಮಿನ್ ಸಿ ಸಮೃದ್ಧವಾಗಿದೆ.
ಹಲವಾರು ಔಷಧೀಯ ಗುಣಗಳೂ ಇವೆ. ನಿಂಬೆಯಿಂದ ಅನೇಕ ರೋಗಗಳಿಗೆ ಮನೆಮದ್ದುಗಳನ್ನು ತಯಾರಿಸಬಹುದು.
ಹಲ್ಲಿನ ನೋವಿಗೆ ನಿಂಬೆ ಹಣ್ಣು ರಾಮಬಾಣ. ನೋವಿರುವ ಹಲ್ಲಿನ ಮೇಲೆ ಒಂದು ಹನಿ ನಿಂಬೆಯ ರಸ ಹಾಕಿದರೆ ಸಾಕು. ನೋವು ಕಡಿಮೆಯಾಗುತ್ತದೆ.
ನಿಂಬೆ ಕೂದಲಿಗೆ ಕೂಡ ಒಳ್ಳೆಯದು. ನೀವು ತಲೆಹೊಟ್ಟು ಹೆಚ್ಚಿದ್ದರೆ, ತೆಂಗಿನ ಎಣ್ಣೆಯನ್ನು ನಿಂಬೆ ರಸದೊಂದಿಗೆ ಬೆರೆಸುವ ಮೂಲಕ ನೀವು ಅದನ್ನು ಕಡಿಮೆ ಮಾಡಬಹುದು.
ನಿಂಬೆ ರಸದೊಂದಿಗೆ ಸೀಗೆ ಪುಡಿಯನ್ನು ಸೇರಿಸಿ ತಲೆಗೆ ಹಚ್ಚಿಕೊಂಡು ಸ್ನಾನ ಮಾಡುವುದರಿಂದ ಹೊಟ್ಟು ನಿವಾರಣೆಯಾಗುತ್ತದೆ.