ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿರ್ದೇಶಕ ದಿನಕರ್ ತೊಗದೀಪ ಅವರು ನಿರ್ದೇಶಕ, ನಟ, ನಿರ್ಮಾಪಕ ಮತ್ತು ಬರಹಗಾರರಾಗಿ ಹೆಸರುವಾಸಿಯಾಗಿದ್ದಾರೆ. ಅವರು ನವಗ್ರಹ ಚಿತ್ರವನ್ನು ನಿರ್ದೇಶನ ಮಾಡಿ ಭರ್ಜರಿ ಯಶಸ್ಸು ಕಂಡರು.
ಈ ಚಿತ್ರದಲ್ಲಿ ದರ್ಶನ್ ನೆಗೆಟಿವ್ ರೋಲ್ ಮಾಡಿದ್ದಾರೆ. ನಂತರ ದರ್ಶನ್ ಮುಖ್ಯ ಭೂಮಿಕೆಯಲ್ಲಿ ಸಾರತಿ ಚಿತ್ರವನ್ನು ನಿರ್ದೇಶಿಸಿದರು. ಈ ಯಶಸ್ವಿ ಜೋಡಿ ಮತ್ತೆ ಒಂದಾಗಲು ಸಿದ್ಧವಾಗಿದೆ. ಇದನ್ನು ಕೇಳಿದ ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ.
‘ರಾಯಲ್’ ಸಿನಿಮಾ ಹೆಸರಿನ ಚಿತ್ರವನ್ನು ದಿನಕರ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಸುದ್ದಿಗೋಷ್ಠಿಯಲ್ಲಿ ದರ್ಶನ್ ಕುರಿತು ಪ್ರಶ್ನೆ ಎದುರಾಗಿದೆ. ದಿನಕರ್ ಹಾಗೂ ದರ್ಶನ್ ಮಧ್ಯೆ ಯಾವುದೂ ಸರಿ ಇಲ್ಲ ಎನ್ನುವ ಮಾತಿದೆ. ಈ ಬಗ್ಗೆ ಮಾತನಾಡಿದ ಅವರು, ‘ಅಣ್ಣ ತಮ್ಮ ಬೇರೆ ಆಗಿದ್ದೀವಿ ಎಂದು ಯಾರು ಹೇಳಿದ್ದಾರೆ? ಗಂಡ ಹೆಂಡತಿ ಮಧ್ಯೆ ಹೇಗೆ ಜಗಳವೋ ಹಾಗೆ ಅಣ್ಣ ತಮ್ಮ ಎಂದಮೇಲೆ ಜಗಳ ಇದ್ದೇ ಇರುತ್ತದೆ’ ಎಂದಿದ್ದಾರೆ.
ದರ್ಶನ್‌ಗಾಗಿ ಸಿನಿಮಾ ಮಾಡುತ್ತೇನೆ ಎಂಬ ನಂಬಿಕೆ ನನಗಿದೆ. ಸಿನಿಮಾ ಮಾಡಬೇಕು ಅಂದಾಗ ಕಥೆ ಕೇಳೋಲ್ಲ. ದರ್ಶನ್ ನನಗಿಂತ ಇಂಡಸ್ಟ್ರಿಯಲ್ಲಿ ಸೀನಿಯರ್ ಎಂದು ದಿನಕರ್ ಹೇಳಿದ್ದಾರೆ.