ಸಾಮಾನ್ಯವಾಗಿ ಕ್ಯಾಲೆಂಡರ್ ಹೊಸ ವರ್ಷಕ್ಕೆ ಎಷ್ಟೋ ಮಂದಿ ಈ ವರ್ಷದಲ್ಲಿ ನಾವು ಏನೆಲ್ಲಾ ಬದಲಾವಣೆ ಮಾಡಿಕೊಳ್ಳಬಹುದು ಎಂದು ಬರೆದಿಡುತ್ತಾರೆ. ಅಂತೆಯೇ ಅದನ್ನು ಮಾಡುತ್ತಾರೆ. ಕೆಲವರು ಒಂದು ತಿಂಗಳಷ್ಟೆ ಮಾಡಿ ನಂತರ ಮಾಮೂಲಿ ಜೀವನಕ್ಕೆ ವಾಪಾಸ್ ಆಗುತ್ತಾರೆ. ಅನ್‌ರಿಯಾಲಿಸ್ಟಿಕ್ ಗೋಲ್‌ಗಳಲ್ಲದೆ ಉತ್ತಮವಾದ ರಿಯಾಲಿಸ್ಟಿಕ್ ರೆಸೊಲ್ಯೂಷನ್ ನಿಮ್ಮದಾಗಲಿ. ಏನೆಲ್ಲಾ ಸೇರಿಸಬಹುದು ನಿಮ್ಮ ಲಿಸ್ಟ್‌ಗೆ ನೋಡಿ..
ಒಂದು ಡೈರಿ ಕೊಂಡುಕೊಳ್ಳಿ. ದಿನವೂ ಅದರಲ್ಲಿ ಬರೆಯಿರಿ. ನಿಮ್ಮ ಲೈಫ್ ಪುಟಗಳನ್ನು ತಿರುವ ನೋಡಿ. ಇರುವುದಕ್ಕೆ ಧನ್ಯವಾದ ತಿಳಿಸಿ.
ನಿಮ್ಮನ್ನು ನೀವು ಫಸ್ಟ್ ಪ್ರಿಯಾರಿಟಿ ಮಾಡಿಕೊಳ್ಳಿ. ಹೆಚ್ಚು ಹೆಚ್ಚು ಪ್ರೀತಿಸಿ.
ಬುಕ್ಸ್ ಓದುವ ಅಭ್ಯಾಸ ಇಲ್ಲದಿದ್ರೆ ಶುರು ಮಾಡಿ. ಓದುವ ಅಭ್ಯಾಸ ಇದ್ದರೆ ಇಂತಿಷ್ಟು ಬುಕ್ಸ್ ಓದಲೇಬೇಕು ಎಂದು ಲಿಸ್ಟ್ ಮಾಡಿ.
ಆದಷ್ಟು ಜಂಕ್ ಫುಡ್ ಅವಾಯ್ಡ್ ಮಾಡಿ ದೇಹಕ್ಕೆ ಉತ್ತಮ ಆಹಾರ ಕೊಡ್ತೀನಿ ಎಂದು ಫಿಕ್ಸ್ ಆಗಿ.
ದಿನಕ್ಕೆ ಒಂದು ಗಂಟೆ ವ್ಯಾಯಾಮ ಕಡ್ಡಾಯ. ಯಾವುದೇ ರೀತಿ ಆಗಿರಲಿ. ಬಟ್ ಆಕ್ಟೀವ್ ಆಗಿ ಇರಿ.
ಹೊಸ ಭಾಷೆಯೊಂದನ್ನು ಅಥವಾ ಹೊಸ ಹಾಬಿಯೊಂದನ್ನು ರೂಢಿ ಮಾಡಿಕೊಳ್ಳಿ.
ಕುಟುಂಬದ ಜೊತೆ ಕಳೆದ ವರ್ಷಕ್ಕಿಂತ ಹೆಚ್ಚು ಸಮಯ ಈ ವರ್ಷ ಕಳೆಯಿರಿ. ನೆನಪಿಡಿ ಕಷ್ಟಕ್ಕೆ ಆಗೋದು ಫ್ಯಾಮಿಲಿ ಮಾತ್ರ.
ದುಡ್ಡನ್ನು ಉಳಿಸಿ ಏನಾದರೂ ಒಂದು ಆಸ್ತಿ ಮಾಡಿ. ಅದಾಗದಿದ್ದರೆ ಚಿನ್ನ ಖರೀದಿ ಮಾಡಿ. ಅದೂ ಆಗದಿದ್ದರೆ ಇಂತಿಷ್ಟು ಹಣ ಅಂತ ಸೇವಿಂಗ್ಸ್ ಇರಲಿ.
ಟ್ರಾವೆಲ್ ಮಾಡಿ. ಈ ವರ್ಷ ಇದಿಷ್ಟು ಜಾಗಗಳಿಗೆ ಹೋಗುತ್ತೇನೆ ಎಂದು ಲಿಸ್ಟ್ ಮಾಡಿಕೊಳ್ಳಿ. ಮಿಸ್ ಮಾಡದೆ ಹೋಗಿಬನ್ನಿ.
ದಿನಕ್ಕೆ ಮೂರರಿಂದ ನಾಲ್ಕು ಲೀಟರ್ ನೀರನ್ನು ಮಿಸ್ ಮಾಡದೆ ಕುಡಿಯುತ್ತೇನೆ ಎಂದು ಪ್ರಮಾಣ ಮಾಡಿಕೊಳ್ಳಿ.
ಪಾಸಿಟಿವ್ ಆಟಿಟ್ಯೂಡ್ ಬೆಳೆಸಿಕೊಳ್ಳಿ. ಚಾರಿಟಿಗೆ ದಾನ ಮಾಡಿ. ಸೋಶಿಯಲ್ ವರ್ಕ್‌ನಲ್ಲಿ ಇನ್‌ವೊಲ್ವ್ ಆಗಿ. ಹೊಸ ಸ್ನೇಹಿತರನ್ನು ಗಳಿಸಿ.
ಪ್ರತಿದಿನ ನಾನು ಎಂಟು ಗಂಟೆ ನಿದ್ದೆ ಮಾಡುತ್ತೇನೆ ಎಂದು ಬರೆದಿಡಿ. ಅಂತೆಯೇ ಬೆಡ್‌ರೂಮ್‌ಗೆ ಮೊಬೈಲ್ ಬಿಟ್ಟು ಹೋಗಿ. ನಿದ್ದೆ ಮಾಡಿ.
ಸಾಮಾಜಿಕ ಜಾಲತಾಣದಿಂದ ನಿಮಗೆ ಉಪಯೋಗಕ್ಕಿಂತ ಸಮಯ ವ್ಯರ್ಥ ಆಗ್ತಿದೆ ಎನಿಸಿದರೆ ಅದಕ್ಕೆ ಗುಡ್ ಬೈ ಹೇಳಿ. ಅಥವಾ ದಿನಕ್ಕೆ ಇಷ್ಟೇ ಟೈಮ್ ನೋಡುತ್ತೇನೆ ಎಂದು ಸಮಯ ನಿಗದಿ ಮಾಡಿ.