ಕನ್ಯಾಕುಮಾರಿ ಕರಾವಳಿಯಲ್ಲಿ ಭಾರತದ ಮೊದಲ ಗ್ಲಾಸ್‌ ಬ್ರಿಡ್ಜ್‌ ಉದ್ಘಾಟನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಸೋಮವಾರ ಕನ್ಯಾಕುಮಾರಿ ಕರಾವಳಿಯಲ್ಲಿರುವ ವಿವೇಕಾನಂದ ರಾಕ್ ಸ್ಮಾರಕ ಮತ್ತು 133 ಅಡಿ ಎತ್ತರದ ತಿರುವಳ್ಳುವರ್ ಪ್ರತಿಮೆಗೆ ಸಂಪರ್ಕ ಕಲ್ಪಿಸುವ ಗಾಜಿನ ಸೇತುವೆಯನ್ನು ಉದ್ಘಾಟಿಸಿದರು.

ಈ ಗಾಜಿನ ಸೇತುವೆಯು ದೇಶದಲ್ಲೇ ಮೊದಲನೆಯದಾಗಿದೆ. ಪ್ರವಾಸಿಗರು ಇಬ್ಬರು ಮಹಾನ್ ಪುರುಷರ ಸ್ಮಾರಕ ಮತ್ತು ಸುತ್ತಮುತ್ತಲಿನ ಸಮುದ್ರದ ದೃಶ್ಯವನ್ನು ವೀಕ್ಷಿಸಲು ಈ ಸೇತುವೆ ನಿರ್ಮಿಸಲಾಗಿದೆ.

“ಸೇತುವೆಯು ಸಮುದ್ರದ ಮೇಲೆ ನಡೆಯುವಂತಹ ಆಹ್ಲಾದಕರ ಅನುಭವವನ್ನು ನೀಡುತ್ತದೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!