ವಿಶ್ವದ ಸರ್ವಶ್ರೇಷ್ಠ 100 ರೆಸ್ಟೋರೆಂಟ್​ಗಳ ಪಟ್ಟಿ ರಿಲೀಸ್‌, ನಮ್ಮ ದೇಶದ ಯಾವ ಉಪಹಾರಗೃಹಗಳಿಗೆ ಮಣೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ವಿಶ್ವದ ಸರ್ವಶ್ರೇಷ್ಠ 100 ರೆಸ್ಟೋರೆಂಟ್​ಗಳ ಪಟ್ಟಿಯಲ್ಲಿ ಭಾರತದ 7 ಉಪಹಾರಗೃಹಗಳು ಸ್ಥಾನ ಪಡೆದುಕೊಂಡಿದೆ. ಯಾವುದು ನೋಡಿ..

ಇತ್ತೀಚೆಗೆ ಟೇಸ್ಟ್​ ಅಟ್ಲಾಸ್ ಎಂಬ ಆಹಾರ ಮಾರ್ಗದರ್ಶನ ನೀಡುವ ಸಂಸ್ಥೆ ವಿಶ್ವದ ಅತ್ಯಂತ ಶ್ರೇಷ್ಠವಾದ ಒಟ್ಟು ನೂರು ಉಪಹಾರಗೃಹಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ ಇದರಲ್ಲಿ ಭಾರತದ ಒಟ್ಟು 7 ರೆಸ್ಟೋರೆಂಟ್​ಗಳು ಸ್ಥಾನ ಪಡೆದಿವೆ. ಈ ಒಂದು ಸ್ಪರ್ಧೆಯಲ್ಲಿ ಒಟ್ಟು 23, 952 ಸಾಂಪ್ರದಾಯಿಕ ಆಹಾರವನ್ನು ಗಣನೆಗೆ ತೆಗೆದುಕೊಂಡು ಅವುಗಳ ಮೇಲೆ ರೆಸ್ಟೋರೆಂಟ್​ಗಳಿಗೆ ಸ್ಥಾನವನ್ನು ನೀಡಲಾಗಿದೆ. ಮೊದಲ ಸ್ಥಾನದಲ್ಲಿ ವಿಯೆನ್ನಾದ ಫಿಲ್ಗಮುಲ್ಲೆರ್ ರೆಸ್ಟೋರೆಂಟ್​​ ಇದೆ.

ಇನ್ನು ಭಾರತದ ಒಟ್ಟು 7 ರೆಸ್ಟೋರೆಂಟ್​ಗಳು 5,7,13,59, 69,77 ಮತ್ತು 78ನೇ ಸ್ಥಾನವನ್ನು ಪಡೆದಿವೆ. ಇವುಗಳಲ್ಲಿ ದೊಡ್ಡ ಅಂಕ ಪಡೆದ ರೆಸ್ಟೋರೆಂಟ್ ಅಂದ್ರೆ ತನ್ನ ಕಟ್​ ಬಿರಿಯಾನಿಗೆ ಫೇಮಸ್ ಆಗಿರುವ ಕೇರಳದ ಕೊಝಿಕೋಡ್​ನ ಪಾರಾಗಾನ್ ರೆಸ್ಟೋರೆಂಟ್.

Kozhikode's Paragon named 11th most legendary restaurant in the world, says  Taste Atlas - The Hinduಇನ್ನೂ ಟೇಸ್ಟ್​ ಅಟ್ಲಾಸ್ ಬಿಡುಗಡೆ ಮಾಡಿರುವ ಲಿಸ್ಟ್​ನಲ್ಲಿ ಕೊಲ್ಕತ್ತಾದ ಪೀಟರ್ ಕ್ಯಾಟ್​ 7ನೇ ಸ್ಥಾನ ಪಡೆದುಕೊಂಡಿದೆ. ಇಲ್ಲಿಯ ಚೆಲೊವ್ ಕಬಾಬ್​ನ ರುಚಿ ಈ ರೆಸ್ಟೋರೆಂಟ್​ನ್ನು ವಿಶ್ವದ ಸರ್ವಶ್ರೇಷ್ಠ ರೆಸ್ಟೊರೆಂಟ್​ಗಳಲ್ಲಿ 7 ನೇ ಸ್ಥಾನವನ್ನು ನೀಡುವಂತೆ ಮಾಡಿದೆ.

PETER CAT, Kolkata (Calcutta) - Restaurant Reviews, Phone Number & Photos -  Tripadvisorಹರಿಯಾಣದ ಮುರ್ತಾಲದಲ್ಲಿರುವ ಅಮ್ರಿಕ್ ಸುಖದೇವ್ ರೆಸ್ಟೋರೆಂಟ್​ ಈ ಪಟ್ಟಿಯಲ್ಲಿ 13ನೇ ಸ್ಥಾನವನ್ನು ಪಡೆದುಕೊಂಡಿದೆ. ಇಲ್ಲಿಯ ಆಲೂ ಪರೋಟಾ ಜಾಗತಿಕವಾಗಿ ತನ್ನದೇ ಒಂದು ಜನಪ್ರಿಯತೆಯನ್ನು ಕಾಯ್ದುಕೊಂಡಿದೆ.

Amrik Sukhdev Dhaba included in world top restaurants 7 restaurants of  India got place see list - India Hindi News दुनिया के टॉप रेस्तरां में  शामिल हुआ अमरीक सुखदेव ढाबा, भारत के ಇನ್ನು ಪಟ್ಟಿಯಲ್ಲಿ ದೆಹಲಿಯ ಕರೀಮ್ಸ್​ 59ನೇ ಸ್ಥಾನ ಪಡೆದುಕೊಂಡಿದೆ 1913ರಲ್ಲಿ ಶುರುವಾದ ಈ ರೆಸ್ಟೋರೆಂಟ್​ ಮುಘಲಾಯಿ ಶೈಲಿಯ ಆಹಾರವನ್ನು ಸಿದ್ಧಗೊಳಿಸುತ್ತದೆ. ಇದರ ಕುರ್ಮಾ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ.

Old Delhi's 108-year-old Karim's takes its expansion plans the franchisee  way, ET HospitalityWorldಇನ್ನು ನಮ್ಮ ಬೆಂಗಳೂರಿನ ರೆಸ್ಟೋರೆಂಟ್​ ಒಂದು ಕೂಡ ಈ ಪಟ್ಟಿಯಲ್ಲಿ ಜಾಗ ಪಡೆದಿದೆ. ಮಸಾಲಾ ದೋಸೆಗೆ ಫೇಮಸ್ ಆಗಿರುವ ಸೆಂಟ್ರಲ್ ಟಿಫಿನ್ ರೂಮ್ ಟೇಸ್ಟ್ ಅಟ್ಲಾಸ್ ಬಿಡುಗಡೆ ಮಾಡಿರುವ ಬೆಸ್ಟ್ ರೆಸ್ಟೋರೆಂಟ್​ ಲಿಸ್ಟ್​ನಲ್ಲಿ 69ನೇ ಸ್ಥಾನವನ್ನು ಪಡೆದುಕೊಂಡಿದೆ.

CTR - Central Tiffin Room: Malleshwara's Best Masala Dosa

ಇನ್ನು ಲಿಸ್ಟ್​ನಲ್ಲಿ ಸ್ಥಾನ ಪಡೆದಿರುವ ಭಾರತದ 6 ಮತ್ತು 7ನೇ ರೆಸ್ಟೋರೆಂಟ್​ಗಳೆಂದರೆ ಹೊಸ ದೆಹಲಿಯ ಗುಲಾಟಿ ತನ್ನ ಬಟರ್ ಚಿಕನ್​ಗೆ ಫೇಮಸ್​ ಇದು 77ನೇ ಸ್ಥಾನ ಪಡೆದಿದೆ.

Gulati, Pandara Road Market, New Delhi | Zomato ಮುಂಬೈನ ಪ್ರಸಿದ್ಧ ದಕ್ಷಿಣ ಭಾರತದ ಆಹಾರ ತಯಾರಿಸುವ ರಾಮ ಆಶ್ರಯ 78 ಸ್ಥಾನವನ್ನು ಪಡೆದಿದೆ. ಈ ರೆಸ್ಟೋರೆಂಟ್​ನಲ್ಲಿ ಸಿದ್ಧಗೊಳ್ಳುವ ಉಪ್ಪಿಟ್ಟು (ಉಪ್ಮಾ) ಟೇಸ್ಟ್ ಅಟ್ಲಾಸ್​ನ ಗಮನ ಸೆಳೆದಿದೆ.

Ram Ashraya | TasteAtlas | Recommended authentic restaurants

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!