ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಯುನೈಟೆಡ್ ಸ್ಟೇಟ್ಸ್ನ ನ್ಯೂ ಓರ್ಲಿಯನ್ಸ್ನಲ್ಲಿ ನಡೆದ ಸಾಮೂಹಿಕ ದಾಳಿಯಿಂದ ಅಮೆರಿಕ ತತ್ತರಿಸಿದೆ.
ಇತ್ತ ನ್ಯೂ ಓರ್ಲಿಯನ್ಸ್’ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಬಲವಾಗಿ ಖಂಡಿಸಿದ್ದಾರೆ.
ನ್ಯೂ ಓರ್ಲಿಯನ್ಸ್’ನಲ್ಲಿ ನಡೆದ ಹೇಡಿತನದ ಭಯೋತ್ಪಾದಕ ದಾಳಿಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಸಂತ್ರಸ್ತರು ಮತ್ತು ಅವರ ಕುಟುಂಬಗಳೊಂದಿಗೆ ಇವೆ. ಈ ದುರಂತದಿಂದ ಗುಣಮುಖರಾಗುತ್ತಿದ್ದಂತೆ ಅವರಿಗೆ ಶಕ್ತಿ ಮತ್ತು ಸಾಂತ್ವನ ಸಿಗಲಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ನ್ಯೂ ಓರ್ಲಿಯನ್ಸ್ ದಾಳಿಯ ನಂತರ, ನ್ಯೂಯಾರ್ಕ್ನ ನೈಟ್ಕ್ಲಬ್ನಲ್ಲಿ ಶೂಟಿಂಗ್ ನಡೆದಿದೆ. ನೈಟ್ಕ್ಲಬ್ನಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಕನಿಷ್ಠ 11 ಜನರು ಗಾಯಗೊಂಡಿದ್ದಾರೆ. ಈ ಹಿಂದೆ ಅಮೆರಿಕದ ನ್ಯೂ ಓರ್ಲಿಯನ್ಸ್ನಲ್ಲಿ ಉಗ್ರನೊಬ್ಬ 15 ಮಂದಿಯನ್ನು ಬಲಿ ಪಡೆದಿದ್ದ. ಮತ್ತೊಂದು ಘಟನೆಯಲ್ಲಿ ಟ್ರಂಪ್ ಹೋಟೆಲ್ ಮುಂದೆ ಸ್ಫೋಟ ಸಂಭವಿಸಿದೆ.