ಹೊಸ ದಿಗಂತ ವರದಿ ಮಂಡ್ಯ :
ಸಾರಿಗೆ ಬಸ್ ಡಿಕ್ಕಿ ಹೊಡದೆ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಕೆ.ಆರ್. ಪೇಟೆ ತಾಲೂಕಿನ ಕೃಷ್ಣಾಪುರ ಬಳಿಯ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ತಾಲೂಕಿನ ಗಾಂಧಿನಗರದ ನಿವಾಸಿ ಮೊಗಣ್ಣಶೆಟ್ಟಿ (60) ಎಂಬಾತನೇ ಸಾವನ್ನಪ್ಪಿದ ಬೈಕ್ ಸವಾರ. ಕಾರ‌್ಯನಿಮಿತ್ತ ಕಿಕ್ಕೇರಿಗೆ ತೆರಳಿ ವಾಪಸ್ಸು ಗ್ರಾಮಕ್ಕೆ ಬರುವಾಗ ಕೃಷ್ಣಾಪುರ ಬಳಿ ಸುರವರ್ಧಕ ಲಿಕ್ಕರ್ ಶಾಪ್ ಬಳಿ ಕೆ.ಆರ್.ಪೇಟೆಯಿಂದ ಚನ್ನರಾಯಣಪಟ್ಟಣ ಕಡೆಗೆ ಹೋಗುತ್ತಿದ್ದ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೊಗಣ್ಣಶೆಟ್ಟಿ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಕಿಕ್ಕೇರಿ ಇನ್ಸ್‌ಪೆಕ್ಟರ್ ರೇವತಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.ಶವವನ್ನು ಕೆ.ಆರ್. ಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಪರೀಕ್ಷೆ ಬಳಿಕ ವಾರಸುದಾರರಿಗೆ ನೀಡಿದರು.
ಈ ಸಂಬಂಧ ಕಿಕ್ಕೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.