ಸಿಲಿಂಡರ್​ ಸ್ಫೋಟ ದುರಂತ: ಮೃತ 8 ಅಯ್ಯಪ್ಪ ಮಾಲಾಧಾರಿ ಕುಟುಂಬಕ್ಕೆ ಪರಿಹಾರ ಘೋಷಣೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಹುಬ್ಬಳ್ಳಿ ನಗರದಲ್ಲಿ ಸಿಲಿಂಡರ್​ ಸ್ಫೋಟ ದುರಂತದಲ್ಲಿ ಮೃತಪಟ್ಟ 8 ಅಯ್ಯಪ್ಪ ಮಾಲಾಧಾರಿಗಳ ಕುಟುಂಬಗಳಿಗೆ ಇದೀಗ ರಾಜ್ಯ ಸರ್ಕಾರ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದೆ.

ಆ ಮೂಲಕ ಪರಿಹಾರಕ್ಕಾಗಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್​ ಬರೆದಿದ್ದ ಪತ್ರಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ.

ಹುಬ್ಬಳ್ಳಿಯ ಅಚ್ಚವ್ವ ಕಾಲೋನಿಯ ಅಯ್ಯಪ್ಪನ ಸನ್ನಿಧಿಯಲ್ಲಿ ಡಿಸೆಂಬರ್​ 22ರಂದು ಸಿಲಿಂಡರ್​ ಸ್ಫೋಟ ಸಂಭವಿಸಿತ್ತು. ಅಗ್ನಿ ದುರಂತದ 9 ಮಾಲಾಧಾರಿಗಳು ಗಾಯಗೊಂಡಿದ್ದರು. ಚಿಕಿತ್ಸೆ ಫಲಿಸದೆ ಒಬ್ಬರ ಬೆನ್ನಿಗೊಬ್ಬರಂತೆ ಮೃತಪಟ್ಟಿದ್ದಾರೆ. ಇತ್ತೀಚೆಗೆ ಉಣಕಲ್​​​​ನ ಪ್ರಕಾಶ್​ ಬಾರಕೇರ ಕೂಡ ಚಿಕಿತ್ಸೆ ಫಲಿಸದೆ ಪ್ರಾಣಬಿಟ್ಟಿದ್ದಾನೆ. ಈ ಮೂಲಕ ಸಾವಿನ ಸಂಖ್ಯೆ 8ಕ್ಕೆ ಏರಿಕೆ ಆಗಿದೆ. 9 ಜನರ ಪೈಕಿ ನಿಜಲಿಂಗಪ್ಪ ಬೇಪುರಿ, ಸಂಜಯ್ ಸವದತ್ತಿ, ಮಂಜು ವಾಗ್ಮೋಡೆ, ಲಿಂಗರಾಜ ಬೀರನೂರ, ತೇಜಸ್ವರ್ ಸುತಾರೆ, ರಾಜು ಮೂಗೇರಿ, ಶಂಕರ್ ಊರ್ಬಿ, ಪ್ರಕಾಶ್ ಬಾರಕೇರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಮೃತ ಮಾಲಾಧಾರಿಗಳಿಗೆಲ್ಲ ಶೇ.70-80ರಷ್ಟು ಸುಟ್ಟು ಗಾಯವಾಗಿತ್ತು. ಅಂತಾರಾಷ್ಟ್ರೀಯ ತಜ್ಞ ವೈದ್ಯರೂ ಸಲಹೆ ಪಡೆದಿದ್ದೆವು ಆದ್ರೂ ಉಳಿಸಿಕೊಳ್ಳಲು ಆಗಲಿಲ್ಲ. 8 ಜನರ ಸಾವು ನಮಗೆ ನೋವು ತಂದಿದೆ ಅಂತ ಕಿಮ್ಸ್ ನಿರ್ದೇಶಕ ಡಾ. ಎಸ್​ಎಫ್ ಕಮ್ಮಾರ ಬೇಸರ ವ್ಯಕ್ತಪಡಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!